ಮಾನ, ಮರ್ಯಾದೆ, ಲಜ್ಜೆ ಬಿಟ್ಟ ಪಕ್ಷ ರಾಜ್ಯ ಬಿಜೆಪಿ ಮಾತ್ರ: ಕಾಂಗ್ರೆಸ್ ಟೀಕೆ

ಬೆಂಗಳೂರು, ಜ.26: ಮಾನ, ಮರ್ಯಾದೆ, ಲಜ್ಜೆ ಮೂರೂ ಬಿಟ್ಟಿರುವ ಪಕ್ಷವೇನಾದರೂ ಇದ್ದರೆ ಅದು ರಾಜ್ಯ ಬಿಜೆಪಿ ಮಾತ್ರ. ನಾಡಿಗೆ ಹಸಿವಿನ ಚಿಂತೆ, ಯುವಕರಿಗೆ ಉದ್ಯೋಗದ ಚಿಂತೆ, ರೈತರಿಗೆ ಬದುಕಿನ ಚಿಂತೆ, ಸರಕಾರಕ್ಕೆ ಮಾತ್ರ ಲೂಟಿಯದ್ದೇ ಚಿಂತೆಯಾಗಿದೆ. ದಿನಕ್ಕೆ ಎರೆಡೆರೆಡು ಭಾರಿ ಖಾತೆ ಬದಲಾವಣೆ ಮಾಡುತ್ತಾ, ಅಭಿವೃದ್ಧಿ ಮರೆತ ಬಿಜೆಪಿಯಿಂದ ರಾಜ್ಯ ನಲುಗುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.
ಸಂಗೊಳ್ಳಿ ರಾಯಣ್ಣ ಸ್ಮರಣೆ: ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಬಲಗೈ ಬಂಟರಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಕೊನೆ ಉಸಿರಿನವರೆಗೂ ಹೋರಾಟ ನಡೆಸಿದ, ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Next Story





