ಎ.1ರಿಂದ ಪಡಿತರದಲ್ಲಿ ರಾಗಿ, ಜೋಳ ವಿತರಣೆ: ಆಹಾರ ಸಚಿವ ಉಮೇಶ್ ಕತ್ತಿ

ಕಲಬುರಗಿ, ಜ.26: ಪಡಿತರ ವ್ಯವಸ್ಥೆಯಲ್ಲಿ ತೊಗರಿ ಮತ್ತು ರಾಗಿ ವಿತರಿಸಬೇಕೆಂಬುದು ಜನತೆಯ ಬಹುದಿನದ ಬೇಡಿಕೆಯಾಗಿದ್ದು, ಎ.1ರಿಂದ ಪಡಿತರ ವಿತರಣೆಯಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ನಗರದ ಡಿಎಆರ್ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಹುಭಾಗಗಳಲ್ಲಿ ರಾಗಿ ಹಾಗೂ ಜೋಳವನ್ನು ಮುಖ್ಯ ಆಹಾರವಾಗಿ ಸೇವನೆ ಮಾಡುವವರಿದ್ದಾರೆ. ಹೀಗಾಗಿ ಪಡಿತರದಲ್ಲಿ ರಾಗಿ, ಜೋಳ ಪದಾರ್ಥಗಳನ್ನು ವಿತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಸತ್‍ನಲ್ಲಿ ಅಂಗೀಕರಿಸಿರುವ 3ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಹತ್ತಾರು ವರ್ಷಗಳ ಕಾಲ ಒಂದು ಕಾಯ್ದೆಯನ್ನು ಸಹಿಸಿಕೊಂಡವರಿಗೆ ಕೇಂದ್ರ ಸರಕಾರ ಜಾರಿ ಮಾಡಿರುವ ಹೊಸ ಕೃಷಿ ಕಾಯ್ದೆಯನ್ನು 2ವರ್ಷಗಳಿಗಾದರೂ ಸಹಿಕೊಳ್ಳಬೇಕು.
-ಉಮೇಶ್ ಕತ್ತಿ, ಆಹಾರ ಸಚಿವ
Next Story





