ಮಂಗಳೂರು: ಎಸ್‌ಡಿಪಿಐ ವತಿಯಿಂದ ಐಕ್ಯತಾ ಸಂಗಮ

ಮಂಗಳೂರು : ಕೇಂದ್ರ ಸರಕಾರ ಇತ್ತೀಚಿಗೆ ಜಾರಿಗೆ ತರಲು ಹೊರಟಿರುವ ಕೃಷಿ ಮಸೂದೆಯ ವಿರುದ್ಧ ದೇಶದಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಗೆ ನೈತಿಕ ಬೆಂಬಲವಾಗಿ ಗಣರಾಜ್ಯೋತ್ಸವ ದಿನದಂದು ಎಸ್‌ಡಿಪಿಐ ದ.ಕ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಬಾಗದಲ್ಲಿ ರೈತ ಐಕ್ಯತಾ ಸಂಗಮ ಎಂಬ ಹೆಸರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ಪ್ರತಿಭಟನೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆಯವರು ಈ ದೇಶದಲ್ಲಿ ಫ್ಯಾಶಿಸ್ಟ್ ಮನೋಭಾವದ ಸರಕಾರವಿದ್ದು, ಇದು ಕೇವಲ ಅಲ್ಪಸಂಖ್ಯಾತರ, ದಲಿತ ಸಮುದಾಯಗಳಿಗೆ ಮಾತ್ರ ಮಾರಕವಲ್ಲ. ಇದು ದೇಶದ ಎಲ್ಲಾ ವರ್ಗಗಳ ಬದುಕನ್ನು ಕಸಿದುಕೊಳ್ಳುವ ಸಂವಿಧಾನ ವಿರೋಧಿ ಸರಕಾರವಾಗಿದ್ದು, ಇದರ ಅಪಾಯದ ವಿರುದ್ಧ ಎಸ್‌ಡಿಪಿಐ ಕಳೆದ 10 ವರ್ಷಗಳಿಂದ ಜನತೆಯನ್ನು ಎಚ್ಚರಿಸುತ್ತಲೇ ಬರುತ್ತಿದ್ದು, ಇದೀಗ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನ ವಿರೋಧಿ ನಿಲುವುಗಳು ನಮ್ಮ ಮುಂದೆ ಒಂದೊಂದಾಗಿ ಅನಾವರಣ ಗೊಳ್ಳುತ್ತಿದ್ದು ಇದರ ವಿರುದ್ಧ ನಾವು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆ ಇದರ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ, ರೈತ ಸಂಘ ಹಸಿರು ಸೇನೆ ಇದರ ದ.ಕ ಜಿಲ್ಲಾಧ್ಯಕ್ಷ ಓಸ್ವಾಲ್ ಡಿಸೋಜ, ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಮಾತನಾಡಿದರು.
ಮಂಗಳೂರು ಮಹಾ ನಗರ ಪಾಲಿಕೆ ಕಾರ್ಪೋರೇಟರ್ ಮುನೀಬ್ ಬೆಂಗರೆ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಲ್ವೀನ್ ಮೆನೇಜಸ್, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಬೂಬಕರ್ ಕುಲಾಯಿ ಸಂದರ್ಭೋಚಿತವಾಗಿ ಮಾತನಾಡಿದರು. ಸುಹೈಲ್ ಖಾನ್, ನೌಶಾದ್ ಚೊಕ್ಕಬೆಟ್ಟು, ಅಝರ್ ಚೊಕ್ಕಬೆಟ್ಟು ಮುಂತಾದವರು ಉಪಸ್ಥಿತರಿದ್ದರು. ಖಾದರ್ ಫರಂಗಿಪೇಟೆ ಸ್ವಾಗತಿಸಿ ಇಫಾನ್ ಸುರತ್ಕಲ್ ನಿರೂಪಿಸಿ, ವಂದಿಸಿದರು.
ಪ್ರತಿಭಟನೆಯ ಮೊದಲು ಸುರತ್ಕಲ್, ಮೂಡಬಿದಿರೆ, ಬೆಂಗರೆ, ಕೈಕಂಬ ಮುಂತಾದ ಕಡೆಗಳಿಂದ ಕಾರ್ಯಕರ್ತರು ರಾಷ್ಟ್ರಧ್ವಜ ದೊಂದಿಗೆ ಬೈಕ್ ರ‍್ಯಾಲಿ ಮುಖಾಂತರ ಆಗಮಿಸಿದರು.






.jpeg)
.jpeg)
.jpeg)


