‘ಮಾಜಿ ಅಧ್ಯಕ್ಷರ ಕಚೇರಿ’ಯನ್ನು ತೆರೆದ ಡೊನಾಲ್ಡ್ ಟ್ರಂಪ್

ಪಾಮ್ ಬೀಚ್ (ಫ್ಲೋರಿಡ), ಜ. 26: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪಾಮ್ ಬೀಚ್ ಕೌಂಟಿಯಲ್ಲಿ ಕಚೇರಿಯೊಂದನ್ನು ತೆರೆದಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಾಗೂ ಹೇಳಿಕೆಗಳನ್ನು ನೀಡುವುದಕ್ಕಾಗಿ ಅವರು ಈ ಕಚೇರಿಯನ್ನು ಬಳಸಿಕೊಳ್ಳಲಿದ್ದಾರೆ.
‘‘ಮಾಜಿ ಅಧ್ಯಕ್ಷರ ಕಚೇರಿಯು ಟ್ರಂಪ್‌ರ ಪತ್ರವ್ಯವಹಾರಗಳು, ಸಾರ್ವಜನಿಕ ಹೇಳಿಕೆಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಇತರ ಅಧಿಕೃತ ಚಟುವಟಿಕೆಗಳನ್ನು ನಿಭಾಯಿಸುತ್ತದೆ’’ ಎಂದು ಅವರ ಕಚೇರಿ ಹೊರಡಿಸಿದ ಪತ್ರಿಕಾ ಪ್ರಕಟನೆಯೊಂದು ತಿಳಿಸಿದೆ.
‘‘ಇಂದು, ಅಮೆರಿಕದ 45ನೇ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಔಪಚಾರಿಕವಾಗಿ ಮಾಜಿ ಅಧ್ಯಕ್ಷರ ಕಚೇರಿಯನ್ನು ಉದ್ಘಾಟಿಸಿದರು’’ ಎಂದು ಹೇಳಿಕೆ ತಿಳಿಸಿದೆ.
Next Story





