Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ.ಬಂಗಾಳ:ಚುನಾವಣೆ ಸಮೀಪಿಸುತ್ತಿದ್ದಂತೆ...

ಪ.ಬಂಗಾಳ:ಚುನಾವಣೆ ಸಮೀಪಿಸುತ್ತಿದ್ದಂತೆ ತಪ್ಪುಮಾಹಿತಿಗಳ ಅಭಿಯಾನ ತೀವ್ರಗೊಳಿಸಿರುವ ಬಿಜೆಪಿ

“ ಬಿಡುವಿಲ್ಲದೇ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು”

ವಾರ್ತಾಭಾರತಿವಾರ್ತಾಭಾರತಿ28 Jan 2021 5:56 PM IST
share
ಪ.ಬಂಗಾಳ:ಚುನಾವಣೆ ಸಮೀಪಿಸುತ್ತಿದ್ದಂತೆ ತಪ್ಪುಮಾಹಿತಿಗಳ ಅಭಿಯಾನ ತೀವ್ರಗೊಳಿಸಿರುವ ಬಿಜೆಪಿ

ಕೋಲ್ಕತಾ,ಜ.28: ಕಳೆದ ಕೆಲವು ವರ್ಷಗಳಲ್ಲಿ ತಪ್ಪು ಮಾಹಿತಿಗಳನ್ನು ಹರಡುತ್ತಿರುವುದಕ್ಕಾಗಿ ಪ.ಬಂಗಾಲ ಬಿಜೆಪಿ ಉಸ್ತುವಾರಿ ಕೈಲಾಷ್ ವಿಜಯವರ್ಗೀಯ ಮತ್ತು ಸಹ ಉಸ್ತುವಾರಿ ಅಮಿತ್ ಮಾಳವೀಯ ಸೇರಿದಂತೆ ಪಕ್ಷದ ಹಲವು ಹಿರಿಯ ರಾಜ್ಯನಾಯಕರು ಟೀಕೆಗಳಿಗೊಳಗಾಗಿದ್ದರೂ ಈ ವರ್ಷ ಚುನಾವಣೆಗೆ ಸಜ್ಜಾಗುತ್ತಿರುವ ಬಂಗಾಳದಲ್ಲಿ ಬಿಜೆಪಿಯ ತಪ್ಪು ಮಾಹಿತಿಗಳ ಅಭಿಯಾನ ನಿಂತಿಲ್ಲ,ಬದಲು ಚುನಾವಣೆ ಸಮೀಪಿಸುತ್ತಿದ್ದಂತೆ ಅದು ಇನ್ನಷ್ಟು ತೀವ್ರಗೊಂಡಿದೆ.

ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದಕ್ಕಾಗಿ ಬಿಜೆಪಿ ಶಾಸಕರು,ಸಂಸದರು ಮತ್ತು ಪದಾಧಿಕಾರಿಗಳ ವಿರುದ್ಧ ಪ.ಬಂಗಾಳ ಪೊಲೀಸರು ಹಲವಾರು ಪ್ರಕರಣಗಳನ್ನು ದಾಖಲಿಸಿದ್ದರೂ ಇತ್ತೀಚಿನ ಕೆಲವು ದಿನಗಳಲ್ಲಿ ರಾಜ್ಯ ಬಿಜೆಪಿಯಿಂದ ತಪ್ಪುಮಾಹಿತಿಗಳ ಮಹಾಪೂರವೇ ಹರಿದುಬರುತ್ತಿದೆ.

‘ಜೈ ಶ್ರೀ ರಾಮ’ ವಿರುದ್ಧ ‘ಲಾ ಇಲಾಹ ಇಲ್ಲಲ್ಲಾಹ್’

ಜ.23ರಂದು ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯ ಅಂಗವಾಗಿ ಕೋಲ್ಕತಾದ ವಿಕ್ಟೋರಿಯಾ ಮೆಮೋರಿಯಲ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತನ್ನ ಭಾಷಣವನ್ನು ಆರಂಭಿಸಿದಾಗ ಸಭಿಕರಲ್ಲಿ ಒಂದು ಗುಂಪು ‘ಜೈ ಶ್ರೀ ರಾಮ ’ ಘೋಷಣೆಗಳನ್ನು ಕೂಗಿತ್ತು. ಇದರಿಂದ ಅಸಮಾಧಾನಗೊಂಡ ಮಮತಾ ತನ್ನ ಭಾಷಣವನ್ನು ಅಲ್ಲಿಗೇ ಮೊಟಕುಗೊಳಿಸಿದ್ದರು. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೀಡಿಯೊ ಕ್ಲಿಪ್ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು.

 ನಂತರ ಭಾಷಣ ಮಾಡಿದ ಮೋದಿ ಈ ಘಟನೆಯ ಬಗ್ಗೆ ಪ್ರಸ್ತಾಪಿಸಿರಲಿಲ್ಲವಾದರೂ,ಮಾಳವೀಯ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ಬಿಜೆಪಿ ನಾಯಕರು ಜೈ ಶ್ರೀರಾಮ ಘೋಷಣೆ ಕೂಗಿದ್ದನ್ನು ತನಗೆ ಮಾಡಿದ ಅವಮಾನವೆಂದು ಪರಿಗಣಿಸಿದ್ದಕ್ಕಾಗಿ ಮಮತಾರನ್ನು ಟೀಕಿಸಿದ್ದರು.

ಮರುದಿನ ಪ.ಬಂಗಾಳ ಬಿಜೆಪಿಯ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಎರಡು ವೀಡಿಯೊ ಕ್ಲಿಪ್‌ಗಳನ್ನು ಪೋಸ್ಟ್ ಮಾಡಲಾಗಿದ್ದು,‘ಏಕಿಂತಹ ಬೂಟಾಟಿಕೆ ಮಮತಾಜಿ? ಇಸ್ಲಾಮಿಕ್ ಪ್ರಾರ್ಥನೆಯನ್ನು ಸ್ವಾಗತಿಸುತ್ತೀರಿ,ಆದರೆ ಜೈ,ಶ್ರೀರಾಮ ಘೋಷಣೆಯಿಂದ ಮುನಿಸಿಕೊಳ್ಳುತ್ತೀರಿ’ಎಂಬ ಅಡಿಬರಹವನ್ನು ನೀಡಲಾಗಿತ್ತು.

1.3 ನಿಮಿಷಗಳ ವಿಡಿಯೊ ಕ್ಲಿಪ್‌ನಲ್ಲಿ ಮೊದಲ 12 ಸೆಕೆಂಡ್‌ಗಳು ಮಮತಾ ‘ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದರ್ರಸೂಲಲ್ಲಾ ’ ಎಂದು ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ತೋರಿಸಿದರೆ,ವೀಡಿಯೊದ ಉಳಿದ ಭಾಗ ವಿಕ್ಟೋರಿಯಾ ಮೆಮೋರಿಯಲ್ ಘಟನೆಯನ್ನು ತೋರಿಸಿತ್ತು.

 ಆದರೆ ಮೂಲ ವೀಡಿಯೊಗಾಗಿ ಹುಡುಕಾಟ ನಡೆಸಿದಾಗ ಈ ವೀಡಿಯೊ ಕ್ಲಿಪ್‌ನ ಅಸಲಿಯತ್ತು ಹೊರಗೆ ಬಿದ್ದಿದೆ. ಈ 12 ಸೆಕೆಂಡ್‌ಗಳ ವೀಡಿಯೊ ಕ್ಲಿಪ್ ಮಮತಾ ಹಿಂದು ಶ್ಲೋಕಗಳನ್ನೂ ಪಠಿಸಿದ್ದ ಸುದೀರ್ಘ ಭಾಷಣವೊಂದರ ಭಾಗವಾಗಿತ್ತು ! 1.35 ನಿಮಿಷಗಳ ಮಮತಾರ ಈ ಭಾಷಣದ ವೀಡಿಯೊ ಕ್ಲಿಪ್ ಅವರು ಕೋಮು ಸೌಹಾರ್ದತೆಯ ಬಗ್ಗೆ,ದುರ್ಗಾಪೂಜೆಯ ಸಿದ್ಧತೆ ಬಗ್ಗೆ ಮಾತನಾಡಿದ್ದನ್ನು ಒಳಗೊಂಡಿದೆ. 25 ಸೆಕೆಂಡ್‌ಗಳ ಕಾಲ ದುರ್ಗಾದೇವಿ ಶ್ಲೋಕಗಳನ್ನು ಪಠಿಸಿದ್ದ ಅವರು ಅಲ್ಲಾಹ್,ಏಸು ಕ್ರಿಸ್ತ ಮತ್ತು ಗುರು ನಾನಕ್ ಅವರಿಗೂ ಪ್ರಾರ್ಥನೆಗಳನ್ನು ಸಲ್ಲಿಸಿದ್ದರು.

ಹೀಗಿದ್ದರೂ 12 ಸೆಕೆಂಡ್‌ಗಳ ಇನ್ನೊಂದು ವೀಡಿಯೊ ಕ್ಲಿಪ್‌ನ್ನು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದ ಪ.ಬಂಗಾಳ ಬಿಜೆಪಿ ಘಟಕವು,ಸರಕಾರಿ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿಯವರು ಇಸ್ಲಾಮಿಕ್ ವಚನಗಳನ್ನು ಪಠಿಸಬಹುದಾದರೆ ಜನರು ಜೈ ಶ್ರೀ ರಾಮ ಘೋಷಣೆಗಳಿಂದ ಸ್ವಾಗತಿಸಿದ್ದು ಅವರಿಗೆ ಯಾಕೆ ತೊಂದರೆಯನ್ನು ಮಾಡಿತ್ತು? ತುಷ್ಟೀಕರಣ? ಮಮತಾ ತನ್ನ ವರ್ತನೆಯಿಂದ ನೇತಾಜಿಯವರ ಜನ್ಮದಿನದಂದು ಅವರಿಗೆ ಮತ್ತು ಅವರ ಪರಂಪರೆಗೆ ಅವಮಾನವನ್ನುಂಟು ಮಾಡಿದ್ದಾರೆ ಎಂದು ಟೀಕಿಸಿತ್ತು.

ಅಪಘಾತ ಪರಿಹಾರಗಳಿಗೂ ಕೋಮು ಬಣ್ಣ

ಜ.19ರಂದು ಧುಪಗುರಿಯಲ್ಲಿ 14 ಜೀವಗಳನ್ನು ಬಲಿ ತೆಗೆದುಕೊಂಡಿದ್ದ ರಸ್ತೆ ಅಪಘಾತವೊಂದು ಸಂಭವಿಸಿತ್ತು. ಮರುದಿನ ಬೆಳಗ್ಗೆ ಟ್ವೀಟಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ.ಪರಿಹಾರವನ್ನು ಪ್ರಕಟಿಸಿದ್ದರು. ಮಧ್ಯಾಹ್ನ ಮಮತಾ ಮೃತರ ಕುಟುಂಬಗಳಿಗೆ ತಲಾ 2.5 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಪರಿಹಾರವನ್ನು ನೀಡುವ ರಾಜ್ಯ ಸರಕಾರದ ನಿರ್ಧಾರವನ್ನು ಟ್ವೀಟಿಸಿದ್ದರು.

ಇದರ ಮರುದಿನ ರಸ್ತೆ ಅಪಘಾತಗಳ ಬಲಿಪಶುಗಳ ವಿಷಯದಲ್ಲಿ ರಾಜ್ಯ ಸರಕಾರವು ಕೋಮು ಪಕ್ಷಪಾತವನ್ನು ಪ್ರದರ್ಶಿಸುತ್ತದೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಟೀಕಿಸಿದ್ದರು.

 ಮಾಲ್ಡಾದಲ್ಲಿ ಫ್ಯಾಕ್ಟರಿಯೊಂದರಲ್ಲಿ ಸ್ಫೋಟ ಸಂಭವಿಸಿ ಆರು ಮುಸ್ಲಿಮರು ಮೃತಪಟ್ಟಿದ್ದಾಗ ನಗರಾಭೀವೃದ್ಧಿ ಸಚಿವ ಪರ್ಹಾದ್ ಹಕೀಂ ಅವರು ಪರಿಹಾರದ ಚೆಕ್‌ಗಳೊಡನೆ ಹೆಲಿಕಾಪ್ಟರ್ ಮೂಲಕ ಅಲ್ಲಿಗೆ ಧಾವಿಸಿದ್ದರು. ಧುಪಗುರಿಯಲ್ಲಿ ರಸ್ತೆ ಅಪಘಾತದಲ್ಲಿ 14 ಹಿಂದುಗಳು ಮೃತಪಟ್ಟಿದ್ದಾರೆ. ಆದರೆ ರಾಜ್ಯ ಸರಕಾರವು ರಂಗದಲ್ಲಿಯೇ ಇರಲಿಲ್ಲ. ಪ್ರಧಾನಿಗಳು ಪರಿಹಾರವನ್ನು ಒದಗಿಸಿದ್ದರು. ಈ ತುಷ್ಟೀಕರಣದ ಸರಕಾರ ಪರಿಹಾರ ನೀಡುವ ಅಗತ್ಯವಿರಲಿಲ್ಲ ಎಂದು ಘೋಷ್ ಫೇಸ್‌ಬುಕ್‌ನಲ್ಲಿ ಬರೆದಿದ್ದರು.

ಮಾಲ್ಡಾದ ಕಾರ್ಖಾನೆಯಲ್ಲಿ ಸ್ಫೋಟ 2020,ನ.19ರಂದು ಸಂಭವಿಸಿತ್ತು. ಇದು ಬಾಂಬ್ ಸ್ಫೋಟದ ಘಟನೆ ಎಂದು ಬಣ್ಣಿಸಿದ್ದ ರಾಜ್ಯ ಬಿಜೆಪಿ ನಾಯಕರು ಎನ್‌ಐಎ ತನಿಖೆಗೆ ಆಗ್ರಹಿಸಿದ್ದರು. ತನ್ನ ಮುಸ್ಲಿಂ ತುಷ್ಟೀಕರಣ ನೀತಿಯಿಂದಾಗಿ ರಾಜ್ಯ ಸರಕಾರವು ಆಡಳಿತದ ಮೇಲೆ ನಿಯಂತ್ರಣ ಕಳೆದುಕೊಂಡಿದೆ ಮತ್ತು ಸರಕಾರದ ಈ ನೀತಿ ರೋಹಿಂಗ್ಯಾಗಳು ಸೇರಿದಂತೆ ಅಕ್ರಮ ವಲಸೆಯನ್ನು ಉತ್ತೇಜಿಸಿದೆ ಎಂದು ಅವರು ಆರೋಪಿಸಿದ್ದರು.

ಮಮತಾ ಮಾಲ್ಡಾದಲ್ಲಿ ಸ್ಫೋಟ ಸಂಭವಿಸಿದ್ದ ಸ್ಥಳಕ್ಕೆ ಭೇಟಿ ನೀಡುವಂತೆ ಹಕೀಂ ಅವರಿಗೆ ಸೂಚಿದ್ದರು. ಸಂಜೆಯ ವೇಳೆಗೆ ಅದೊಂದು ಅವಘಡ ಎಂದು ಪ್ರಕಟಿಸಿದ್ದ ಸರಕಾರವು ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಪರಿಹಾರವನ್ನು ಪ್ರಕಟಿಸಿತ್ತು.

ಇವು ರಾಜ್ಯ ಬಿಜೆಪಿ ನಾಯಕರು ಹೇಗೆ ತಪ್ಪು ಮಾಹಿತಿಗಳನ್ನು ಹರಡುವ ಅಭಿಯಾವನ್ನು ತೀವ್ರಗೊಳಿಸುತ್ತಿದ್ದಾರೆ ಎನ್ನುವುದಕ್ಕೆ ಎರಡು ನಿದರ್ಶನಗಳು ಮಾತ್ರ. ಪ್ರತಿದಿನವೂ ಬಿಜೆಪಿ ತಪ್ಪು ಮಾಹಿತಿಗಳನ್ನು ಹರಡುತ್ತಲೇ ಇದೆ ಮತ್ತು ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಇದನ್ನು ಇನ್ನಷ್ಟು ತೀವ್ರಗೊಳಿಸುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X