ಪೊಲೀಸ್ ಕೊಲೆಯತ್ನ ಪ್ರಕರಣ : ಮತ್ತೆ ಮೂವರು ಸೆರೆ
ಮಂಗಳೂರು : ನಗರದ ಬಂದರು ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಣೇಶ್ ಕಾಮತ್ ಅವರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ಸಂಖ್ಯೆ ಹನ್ನೊಂದಕ್ಕೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೋಳಾರದ ಇಬ್ರಾಹಿಂ ಶಾಕೀರ್ (19), ಕುದ್ರೋಳಿ ನಿವಾಸಿಗಳಾದ ಅಕ್ಬರ್ (30) ಹಾಗೂ ಮುಹಮ್ಮದ್ ಹನೀಫ್ (32) ಬಂಧಿತರು.
ಈ ಹಿಂದೆ ಬಾಲಕ ಸಹಿತ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Next Story





