ಗರ್ಭಪಾತವನ್ನು ಸಂಪೂರ್ಣವಾಗಿ ನಿಷೇಧಿಸಿದ ಪೋಲ್ಯಾಂಡ್

ವಾರ್ಸಾ (ಪೋಲ್ಯಾಂಡ್), ಜ. 28: ಗರ್ಭಪಾತವನ್ನು ಸಂಪೂರ್ಣವಾಗಿ ನಿಷೇಧಿಸುವ ಪೋಲ್ಯಾಂಡ್‌ನ ಸಾಂವಿಧಾನಿಕ ನ್ಯಾಯಾಲಯದ ತೀರ್ಪು ಬುಧವಾರ ಜಾರಿಗೆ ಬರಲಿದೆ ಎಂದು ಸರಕಾರ ಘೋಷಿಸಿದೆ. ಸರಕಾರದ ಈ ನಿರ್ಧಾರವು ಭಾರೀ ಪ್ರತಿಭಟನೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.
‘‘ಈ ತೀರ್ಪನ್ನು ಇಂದು ಕಾನೂನು ಪುಸ್ತಕದಲ್ಲಿ ಪ್ರಕಟಿಸಲಾಗುವುದು’’ ಎಂದು ಸರಕಾರದ ಮಾಹಿತಿ ಕೇಂದ್ರ ಟ್ವಿಟರ್‌ನಲ್ಲಿ ತಿಳಿಸಿದೆ.
ಸಾಂವಿಧಾನಿಕ ನ್ಯಾಯಾಲಯವು ಅಕ್ಟೋಬರ್‌ನಲ್ಲಿ ತನ್ನ ತೀರ್ಪು ನೀಡಿತ್ತು. ಆಗ ಅದರ ವಿರುದ್ಧ ಭಾರೀ ಪ್ರತಿಭಟನೆಗಳಾಗಿದ್ದವು. ಭ್ರೂಣದಲ್ಲಿ ದೋಷವಿರುವ ಪ್ರಕರಣಗಳಲ್ಲಿ ನಡೆಸಲಾಗುವ ಗರ್ಭಪಾತವೂ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯದ ತೀರ್ಪು ಹೇಳಿದೆ.
Next Story





