ಆಪ್ ಶಾಸಕ ಸೋಮನಾಥ್ ಭಾರ್ತಿಗೆ ಜಾಮೀನು; ಜೈಲುಶಿಕ್ಷೆಗೆ ತಡೆಯಾಜ್ಞೆ

ಹೊಸದಿಲ್ಲಿ, ಜ.28: ಎಐಐಎಂಎಸ್‌ನ ಭದ್ರತಾ ಸಿಬಂದಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ ಭಾರ್ತಿಗೆ ವಿಧಿಸಿದ್ದ 2 ವರ್ಷದ ಜೈಲು ಶಿಕ್ಷೆಗೆ ತಡೆ ನೀಡಿರುವ ದಿಲ್ಲಿಯ ನ್ಯಾಯಾಲಯ, ಅವರಿಗೆ ಜಾಮೀನು ಮಂಜೂರುಗೊಳಿಸಿದೆ.
ಜನವರಿ 23ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಭಾರ್ತಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹಾಗೂ ಜಾಮೀನು ನೀಡುವಂತೆ ಕೋರಿ ಅವರು ದಿಲ್ಲಿಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಗೆ ಸಾಕಷ್ಟು ಸಮಯ ಹಿಡಿಯುವುದರಿಂದ ಅದುವರೆಗೆ ಜೈಲು ಶಿಕ್ಷೆಯನ್ನು ತಡೆಹಿಡಿಯಲಾಗಿದೆ. ಸೋಮನಾಥ್ ಭಾರ್ತಿ 20,000 ರೂ. ಜಾಮೀನು ಬಾಂಡು, ಇಷ್ಟೇ ಮೊತ್ತದ ಮುಚ್ಚಳಿಕೆ ಒದಗಿಸಿದರೆ ಜಾಮೀನು ನೀಡಬಹುದು ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಅವರಿಗೆ 1 ಲಕ್ಷ ರೂ. ದಂಡ ವಿಧಿಸಿದೆ.
Next Story





