ಪೆಟ್ರೋಲ್, ಡೀಸೆಲ್ ಬೆರೆ ಏರಿಕೆ ಖಂಡಿಸಿ ಕುದುರೆ ಟಾಂಗಾ ಏರಿ ವಿನೂತನ ಪ್ರತಿಭಟನೆ

ಮೈಸೂರು, ಜ.28: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಮೈಸೂರು ಸಮಾನ ಮನಸ್ಕರ ವೇದಿಕೆ ವತಿಯಿಂದ ಕುದುರೆ ಟಾಂಗಾ ಏರಿ ವಿನೂತನ ಪ್ರತಿಭಟನೆ ನಡಸಲಾಯಿತು. ಗಾಂಧಿಚೌಕ ವೃತ್ತದಲ್ಲಿ ಪ್ರತಿಭಟನೆ ನಡಸಲಾಯಿತು.
ನಗರದ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟೆಯಲ್ಲಿ ಪೆಟ್ರೋಲ್ ಡಿಸೆಲ್ ಬೆಲೆಯೇರಿಕೆ ಖಂಡಿಸಿ ಕುದುರೆ ಟಾಂಗಾ ಏರಿ ವಿನೂತನವಾಗಿ ಇಂದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿದ್ದು ಇದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ದಿನನಿತ್ಯದ ಪದಾರ್ಥಗಳ ಬೆಲೆ ಏರಿಕೆ ಮಾಡುತ್ತಿರುವುದರಿಂದ ಜನರು ಪರಿತಪಿಸುವಂತಾಗಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆಯ ನಿಯಂತ್ರಣ ಮಾಡುವ ಮೂಲಕ ಜನತೆಯ ನಿತ್ಯಬವಣೆ ತಪ್ಪಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ, ವೇದಿಕೆ ಸಂಚಾಲಕ ಒಂಟಿಕೊಪ್ಪಲ್ ಗುರುರಾಜ್, ಜೆ.ಯೋಗೇಶ್, ಸಿ.ರೇವಣ್ಣ,ವಿ.ಮಧು, ಎಂ.ಎಂಎನ್.ಸ್ವರೂಪ್, ಎಸ್ ಆರ್ ರವಿಕುಮಾರ್, ಎಂ.ಎಸ್. ಮಾದೇಶ್, ಎಸ್.ಶಿವಕುಮಾರ್ ಗೌಡ, ಸಾ.ರಾ. ಅರುಣ್ ಕುಮಾರ್,ಕ್ಯಾತಮಾರನಹಳ್ಳಿ ಆರ್,ಯೋಗೇಶ್, ವಸಂತಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.





