ಕ್ಲಿನಿಕ್ ಗೆ ನುಗ್ಗಿ ವೈದ್ಯರನ್ನು ಗುಂಡು ಹಾರಿಸಿ ಕೊಂದು ಆತ್ಮಹತ್ಯೆಗೈದ ಕ್ಯಾನ್ಸರ್ ರೋಗಿ

ವಾಶಿಂಗ್ಟನ್, ಜ. 28: ಅಮೆರಿಕದ ಟೆಕ್ಸಾಸ್ ರಾಜ್ಯದ ರಾಜಧಾನಿ ಆಸ್ಟಿನ್‌ನಲ್ಲಿರುವ ವೈದ್ಯರೊಬ್ಬರ ಕ್ಲಿನಿಕ್‌ನಲ್ಲಿ ನಡೆದ ಗುಂಡು ಹಾರಾಟದಲ್ಲಿ ಇಬ್ಬರು ವೈದ್ಯರು ಮೃತಪಟ್ಟಿದ್ದಾರೆ ಎಂಬುದಾಗಿ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
ಭಾರತ ಮೂಲದ 43 ವರ್ಷದ ಕ್ಯಾನ್ಸರ್ ಪೀಡಿತ ವೈದ್ಯನೊಬ್ಬ ವೈದ್ಯೆಯೊಬ್ಬರ ಕ್ಲಿನಿಕ್‌ಗೆ ನುಗ್ಗಿ ಆಕೆಯನ್ನು ಗುಂಡಿಟ್ಟು ಕೊಂದು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಭಾರತ ಮೂಲದ ವೈದ್ಯ ಭರತ್ ನರುಮಂಚಿ ಆರಂಭದಲ್ಲಿ ಹಲವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡನು ಎಂದು ಹೇಳಲಾಗಿದೆ. ಅವರಲ್ಲಿ ಹಲವು ತಪ್ಪಿಸಿಕೊಂಡರು ಹಾಗೂ ಇತರರನ್ನು ಹೋಗಲು ಬಿಡಲಾಯಿತು.
ಪೊಲೀಸರು ಮೊದಲು ರೋಬಟನ್ನು ಒಳಗೆ ಕಳುಹಿಸಿದರು. ಬಳಿಕ ‘ಸ್ವಾತ್’ ಪಡೆಗಳು ನುಗ್ಗಿದಾಗ ಒಳಗೆ ಇಬ್ಬರ ಶವಗಳು ಪತ್ತೆಯಾದವು. ಎಂದು ವರದಿಗಳು ತಿಳಿಸಿವೆ
Next Story





