ತುಂಗಾನಗರ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಡಿಕೆ ಕಳ್ಳರ ಬಂಧನ

ಶಿವಮೊಗ್ಗ,ಜ.28: ತುಂಗಾನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ತುಂಗಾನಗರ ವಾಸಿ ತೌಸಿಫ್ ಉಲ್ಲಾ(23),ಆರ್,ಎಂ,ಎಲ್ ನಗರದ ವಾಸಿಗಳಾದ ಮಹಪೂಜ್(23), ಅಜೀಜ್ ಉಲ್ಲಾಖಾನ್(24)ಬಂಧಿತ ಆರೋಪಿಗಳು.
ಈ ಆರೋಪಿಗಳಿಂದ ತುಂಗಾನಗರ ಠಾಣೆಯಲ್ಲಿ ದಾಖಲಾದ 2021ನೇ ಸಾಲಿನ 3 ಪ್ರಕರಣ ಹಾಗೂ 2020ನೇ ಸಾಲಿನ 2 ಪ್ರಕರಣ ಸೇರಿ ಒಟ್ಟು 5 ಅಡಿಕೆ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ 4.25 ಲಕ್ಷ ರೂ ಮೌಲ್ಯದ 1 ಸಾವಿರ ಕೆ.ಜಿ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ 1 ರೆನಾಲ್ಟ್ ಕಾರು, 1 ಸ್ಕೂಟಿ ಮತ್ತು 1 ಪಲ್ಸರ್ ಬೈಕ್‌ನ್ನು ತುಂಗಾನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಪತ್ತೆಗಾಗಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಟಿ ಶೇಖರ್ ಹಾಗೂ ಶಿವಮೊಗ್ಗ ಉಪವಿಭಾಗದ ಡಿವೈಎಸ್‌ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ ತುಂಗಾನಗರ ಠಾಣೆ ವೃತ್ತ ನಿರೀಕ್ಷಕ ದೀಪಕ್ ಎಂ.ಎಸ್ ಹಾಗೂ ಸಬ್‌ಇನ್ಸ್‌ಪೆಕ್ಟರ್ ತಿರುಮಲೇಶ್ ನೇತೃತ್ವದಲ್ಲಿ ತುಂಗಾನಗರ ಠಾಣೆ ಎಎಸ್‌ಐ ನಾರಾಯಣ್ ಜಿ.ಆರ್ ಹಾಗೂ ಸಿಬ್ಬಂದಿಗಳಾದ ಇಮ್ರಾನ್,ರಾಜು,ಅರುಣ್ ಕುಮಾರ್,ರಾಜುನಾಯಕ್,ಲಂಕೇಶ್ ಕುಮಾರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.





