Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗೋಮಾಂಸ ರಫ್ತನ್ನು ಕೈಬಿಟ್ಟ ನಂತರ...

ಗೋಮಾಂಸ ರಫ್ತನ್ನು ಕೈಬಿಟ್ಟ ನಂತರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತನ್ನಿ

ಮುಖ್ಯಮಂತ್ರಿಯವರಿಗೊಂದು ಪತ್ರ

ಎಚ್. ಎಸ್. ದೊರೆಸ್ವಾಮಿಎಚ್. ಎಸ್. ದೊರೆಸ್ವಾಮಿ29 Jan 2021 12:36 AM IST
share
ಗೋಮಾಂಸ ರಫ್ತನ್ನು ಕೈಬಿಟ್ಟ ನಂತರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತನ್ನಿ

ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೇ,

ಸರಕಾರವೇ ಗೋಮಾಂಸದ ರಫ್ತನ್ನು ಹೆಚ್ಚಿಸುತ್ತಿರುವಾಗ ಗೋಹತ್ಯೆ ಕಾಯ್ದೆಯನ್ನು ಜಾರಿಗೆ ತರಲು ಯಾವ ನೈತಿಕ ಹಕ್ಕು ಇದೆ? ಗೋಮಾಂಸ ರಫ್ತನ್ನು ಕೈಬಿಟ್ಟು ಆನಂತರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತನ್ನಿ.

ನನಗೆ ನಿಮ್ಮಿಂದ ಖಚಿತ ಉತ್ತರ ಬರಬೇಕೆಂದು ಆಶಿಸುತ್ತೇನೆ. ಒಬ್ಬ ಭಾರತದ ಪ್ರಜೆಯಾಗಿ ನಿಮ್ಮಿಂದ ಸಮಜಾಯಿಷಿ ಪಡೆಯುವುದು ನನ್ನ ಹಕ್ಕು. ನನಗೆ ಉತ್ತರ ಕೊಡಬೇಕಾದದ್ದು ನಿಮ್ಮ ಕರ್ತವ್ಯ ಎಂದು ಬರೆದಿದ್ದೇನೆ.

ಭಾರತದಿಂದ ಅನೇಕ ವರ್ಷಗಳಿಂದ ಗೋಮಾಂಸವನ್ನು ರಫ್ತು ಮಾಡಲಾಗುತ್ತಿದೆ. ಅದಕ್ಕಾಗಿ ಸರಕಾರ ನಡೆಸುವವರು ಪರವಾನಿಗೆ ಕೊಟ್ಟಿದ್ದಾರೆ. ಮೋದಿ ಸರಕಾರ 2020ರಲ್ಲಿ 14ಲಕ್ಷ ಟನ್ ಗೋಮಾಂಸ ರಫ್ತು ಮಾಡಿದೆ. ವಿಶ್ವದ ಗೋಮಾಂಸ ರಫ್ತುದಾರರಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಬ್ರೆಝಿಲ್ 2020ರಲ್ಲಿ 25,50,000 ಟನ್ ಅಂದರೆ ಪ್ರಪಂಚದ ಇತರ ಕಡೆಗಳಿಂದ ರಫ್ತಾಗುವ ಗೋಮಾಂಸದ ಶೇ. 23.93ರಷ್ಟನ್ನು ರಫ್ತು ಮಾಡಿದೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯ 2020ರಲ್ಲಿ 1,40,000 ಟನ್ ಗೋಮಾಂಸ ಅಂದರೆ ವಿಶ್ವದ ಇತರ ದೇಶಗಳಿಂದ ರಫ್ತಾಗುವ ಗೋಮಾಂಸದ ಒಟ್ಟು ಮೊತ್ತದ 13.14ರಷ್ಟಾಗುತ್ತದೆ. ಭಾರತ ರಫ್ತು ಮಾಡುವ ಗೋಮಾಂಸದ ಮೊತ್ತ ಸರಿ ಸುಮಾರು ಆಸ್ಟ್ರೇಲಿಯಾದಷ್ಟೇ ಆಗುತ್ತದೆ. ಮೋದಿಯವರ ಆಡಳಿತ ಕಾಲದಲ್ಲಿ ಗೋಮಾಂಸದ ರಫ್ತು ಹಿಂದಿನ ವರ್ಷಗಳಿಗಿಂತಲೂ ಅಧಿಕವಾಗಿದೆ. ಗೋಮಾಂಸ ರಫ್ತು ಮಾಡುವವರು 13ವರ್ಷಕ್ಕೆ ಮೇಲ್ಪಟ್ಟ ಮೂಳೆ ಚಕ್ಕಳದ ಗೋವುಗಳನ್ನು ಮಾತ್ರ ಸಾಯಿಸಿ ಗೋಮಾಂಸ ರಫ್ತು ಮಾಡುತ್ತಿಲ್ಲ. ದಷ್ಟಪುಷ್ಟವಾದ ಹಸುಗಳನ್ನೇ ಯಂತ್ರಚಾಲಿತ ಕಸಾಯಿ ಖಾನೆಗಳು ಕೊಂದು ಮಾಂಸವನ್ನು ರಫ್ತು ಮಾಡುತ್ತಿವೆ.

ನಾನು ಮುಂಬೈಯ 5 ಯಂತ್ರಚಾಲಿತ ಕಸಾಯಿಖಾನೆಗಳ ವಿರೋಧವಾಗಿ ಒಂದು ತಿಂಗಳ ಕಾಲ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದೇನೆ. ವಧೆಗೆ ಬರುವ ದಷ್ಟಪುಷ್ಟವಾದ ಹಸುಗಳನ್ನು ತುಂಬಿದ ಟ್ರಕ್ಕುಗಳನ್ನು ತಡೆಯುವ ಪ್ರಯತ್ನದಲ್ಲಿ ಭಾಗಿಯಾಗಿದ್ದೇನೆ. ಈ ವಧೆಗೆ ಬರುವ ಹಸುಗಳು ಹೊತ್ತಿಗೆ 5-6 ಲೀಟರ್ ಹಾಲು ಕೊಡುತ್ತವೆ. ಮುಂಬೈನ ದುರಾಸೆಯ ಗೌಳಿಗರು ಇಷ್ಟೊಂದು ಹಾಲನ್ನು ಕರೆದುಕೊಂಡು ಹೋಗುವುದನ್ನು ಕಣ್ಣಾರೆ ಕಂಡಿದ್ದೇನೆ. ಹಸುವನ್ನು ಯಂತ್ರದ ಒಳಕ್ಕೆ ದೂಡುವ ಮೊದಲು ಸುತ್ತಿಗೆಯಿಂದ ಹಸುವಿನ ಮುಖಕ್ಕೆ ಹೊಡೆದು ಅದರ ಜ್ಞಾನ ತಪ್ಪಿಸಿ ಒಳಕ್ಕೆ ದೂಡುವ ಘೋರ ಕೃತ್ಯವನ್ನು ಕಣ್ಣಾರೆ ಕಂಡು ಕಣ್ಣೀರು ಹಾಕಿದ್ದೇನೆ. ಹಿಂದುತ್ವ ಪ್ರತಿಪಾದಕ ಮೋದಿ ಮತ್ತು ಶಾ ಈ ಘೋರ ಪಾತಕದಲ್ಲಿ ಭಾಗಿಗಳು. ಹಿಂದೂ ಧರ್ಮದಲ್ಲಿ ಅಧರ್ಮ ಎಸಗುವ ಪಾಪಕೃತ್ಯದಲ್ಲಿ ಭಾಗಿಗಳಾಗಿರುವ ಇವರಿಗೆ ನಮ್ಮ ಪುರಾಣಗಳು ಹೇಳುವಂತೆ ನರಕದಲ್ಲಿ ಕಾದ ಎಣ್ಣೆಯಲ್ಲಿ-ಕುಂಭಿ ಪಾಕದಲ್ಲಿ ದೂಡುವ ಶಿಕ್ಷೆಯನ್ನು ಯಮರಾಯ ಕೊಡುತ್ತಾನೆ!.

ಸತ್ತ ಮೇಲಿನ ಮಾತು ಒತ್ತಟ್ಟಿಗಿಡುವ. ಈ ಪಾಪಕೃತ್ಯದಲ್ಲಿ ಸಹಭಾಗಿಗಳಾಗಿರುವ ಮೋದಿ-ಶಾರಿಗೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲು ನೈತಿಕ ಹಕ್ಕು ಇದೆಯೇ? ಮೊದಲು ಮೋದಿ-ಶಾ, ಯಡಿಯೂರಪ್ಪನವರು ಮತ್ತು ನಮ್ಮ ಗವರ್ನರ್ ಹಿಂದೂ ಧರ್ಮದ ಪ್ರಕಾರ ತಾವೇ ಗೋಹಂತಕರಾಗಿ, ಗೋಹತ್ಯೆ ನಿಷೇಧ ಕಾಯ್ದೆ ತಂದಿರುವುದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಕಾಯ್ದೆಯನ್ನು ಹಿಂಪಡೆಯಬೇಕು. ಗೋಮಾಂಸ ರಫ್ತು ಮಾಡುವ ಭಾರತದ ದೊಡ್ಡ 10 ಕಂಪೆನಿಗಳಲ್ಲಿ ನಾಲ್ವರು ಹಿಂದೂಗಳು, ಇಬ್ಬರು ಮುಸ್ಲಿಮರು ಮತ್ತು ತಮ್ಮ ಹೆಸರು ಬಹಿರಂಗಪಡಿಸದ ನಾಲ್ವರು ಅನಾಮಧೇಯರದ್ದು. ಅತಿ ಹೆಚ್ಚು ಗೋಮಾಂಸ ರಫ್ತು ಮಾಡುವ ದೇಶಗಳಲ್ಲಿ ಬ್ರೆಝಿಲ್, ಆಸ್ಟ್ರೇಲಿಯ, ಭಾರತ, ಅಮೆರಿಕಗಳಾದರೆ, ತೀರಾ ಕಡಿಮೆ ರಪ್ತು ಮಾಡುವ ದೇಶಗಳು ಬೋಸ್ನಿಯಾ, ಸ್ವಿಟ್ಸರ್‌ಲ್ಯಾಂಡ್, ಹೊಂಡುರಾಸ್ ಗ್ವಾಟೆಮಾಲಾ, ಮಲೇಶಿಯಾ, ಜಪಾನ್, ಕಝಾಕಿಸ್ತಾನ್, ಸೌದಿ ಅರೇಬಿಯಾ ಚೀನಾ, ರಶ್ಯ, ಕೋಸ್ಟರಿಕಾ, ಕೊಲಂಬಿಯಾ, ಚಿಲಿ, ಯುಕ್ರೇನ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ದೇಶಗಳು 18,000 ಟನ್‌ನಿಂದ 1,000 ಟನ್ ವರೆಗೆ ಮಾತ್ರ ಗೋಮಾಂಸ ರಫ್ತು ಮಾ

ುತ್ತವೆ. ಹೆಚ್ಚು ರಫ್ತು ಮಾಡುವ ದೇಶಗಳು 25,50,000 ಟನ್‌ನಿಂದ 3,30,000 ಟನ್ ವರೆಗೆ ರಫ್ತುಮಾಡುತ್ತವೆ. 33 ಲಕ್ಷ ದೇವತೆಗಳು ಗೋವಿನ ಒಡಲಲ್ಲಿ ಇದ್ದಾರೆ ಎಂದು ಹೇಳುವ ಹಿಂದುತ್ವ ಪ್ರತಿಪಾದಕ ಬಿಜೆಪಿ, ರಾಷ್ಟೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಮುಂತಾದ ಮತಾಂಧ ಸಂಸ್ಥೆಗಳು ತಾವು ಎಂತಹ ಘೋರ ಪಾಪದ ಕೆಲಸದಲ್ಲಿ ಸಹಭಾಗಿಗಳಾಗಿದ್ದೀರಿ ಎಂಬುದನ್ನು ಅರಿಯಿರಿ. ಪ್ರಾುಶ್ಚಿತ ಮಾಡಿಕೊಳ್ಳಿ.

share
ಎಚ್. ಎಸ್. ದೊರೆಸ್ವಾಮಿ
ಎಚ್. ಎಸ್. ದೊರೆಸ್ವಾಮಿ
Next Story
X