ಕೊಳಚೆಯಿಂದ ಕಪ್ಪು ಬಣ್ಣಕ್ಕೆ ತಿರುಗಿದ ಕಲ್ಮಾಡಿ ಹೊಳೆ: ಸ್ಥಳೀಯರ ಆಕ್ರೋಶ

ಮಲ್ಪೆ, ಜ.29: ಹಲವು ವರ್ಷಗಳಿಂದ ಕಲ್ಮಾಡಿ ಪರಿಸರದಲ್ಲಿ ಹರಿಯುವ ಹೊಳೆಯ ಕೊಳಚೆ ನೀರಿಗೆ ಮುಕ್ತಿ ಇಲ್ಲವಾಗಿದ್ದು, ಕಳೆದ 10 ದಿನಗಳಿಂದ ಹೊಳೆಯ ನೀರು ಸಂಪೂರ್ಣ ಕಪ್ಪುಬಣ್ಣಕ್ಕೆ ತಿರುಗಿದೆ. ಇದರ ಪರಿಣಾಮ ಇಡೀ ಪರಿಸರದಲ್ಲಿ ಅಸಹ್ಯ ವಾಸನೆ ಆವರಿಸಿರುವುದರಿಂದ ಸ್ಥಳೀಯರು ನರಕಯಾತನೆ ಪಡುವಂತಾಗಿದೆ.
ಹೊಳೆಯಲ್ಲಿ ನಿರಂತರ ಕೊಳಚೆ ನೀರು ಹರಿಯುತ್ತಿರುವುದರಿಂದ ಡೆಂಗ್ಯೂ, ಮಲೇರಿಯಾದಂತಹ ರೋಗರುಜಿನಗಳು ಇಲ್ಲಿ ಬಾಧಿಸುತ್ತಿವೆ. ಆದರೂ ಸ್ಥಳೀಯಾಡಳಿತ ಈ ಸಮಸ್ಯೆಗೆ ಮುಕ್ತಿ ನೀಡುವಲ್ಲಿ ವಿಲವಾಗಿೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ನಗರದ ಕೊಳಚೆ ನೀರು ಇಂದ್ರಾಣಿ ನದಿಯಲ್ಲಿ ಹರಿದು ಕೊನೆಗೆ ಕಲ್ಮಾಡಿ ಸಸಿತೋಟದ ಪರಿಸರವನ್ನು ಆವರಿಸಿಕೊಳ್ಳು ತ್ತಿದೆ. ಇದರಿಂದ ಕೆಲವು ಭಾಗವಾದ ಸಸಿತೋಟ, ಕಕ್ಕೆತೋಟ, ಮಠತೋಟ, ಹೊಸಕಟ್ಟ, ಬಾಪುತೋಟ ಪ್ರದೇಶದಲ್ಲಿ ನೆಲೆಸಿರುವ 500ಕ್ಕೂ ಅಧಿಕ ಮನೆಗಳಿಗೆ ಪ್ರತಿದಿನ ನರಕ ದರ್ಶನವಾಗುತ್ತಿದೆ.
ಕಳೆದ 10 ದಿವಸಗಳಿಂದ ಹೊಳೆಯ ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿ ದುರ್ವಾಸನೆ ಬೀರುತ್ತಿರುವುದರಿಂದ ಈ ಭಾಗದಲ್ಲಿ ಸಂಚರಿಸುವುದು ಕಷ್ಟಕರ ವಾಗಿದೆ. ಕಲ್ಮಾಡಿ ಸೇತುವೆಯಲ್ಲಿ ಹಾದು ಹೋಗುವಾಗ ಕಮಟು ವಾಸನೆ ಮೂಗಿಗೆ ಬಡಿಯುತ್ತಿದ್ದು, ಇನ್ನು ಇಲ್ಲಿ ನೆಲೆಸಿರುವ ಮನೆ ಮಂದಿಯ ಬದುಕು ಅಧೋಗತಿಯಾಗಿದೆ. ಪಾಚುಗಟ್ಟಿದ ನೀರಿನಲ್ಲಿ ಕ್ರಿಮಿಕೀಟಗಳು ಉತ್ಪತ್ತಿ ಯಾಗು ತ್ತಿದ್ದು, ಕತ್ತಲಾಗುತ್ತಿದ್ದಂತೆ ಸೊಳ್ಳೆಗಳು ಮನೆಯೊಳಗೆ ನುಗ್ಗುತ್ತಿವೆ ಎಂದು ಸ್ಥಳೀಯರಾದ ಜಯಕರ ವಿ.ಸುವರ್ಣ ಸಸಿತೋಟ ಆರೋಪಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಯುತತಿಲೇ ಇದೆ ಯಾವ ಸರಕಾರವೂ ಶಾಶ್ವತ ಪರಿಹಾರವನ್ನು ಒದಗಿಸಿಲ್ಲ. ದುರ್ವಾಸನೆಯುಕ್ತ ಕೊಳಚೆ ನೀರಿನಿಂದಾಗಿ ಮನೆಯ ದೈವದ ಮೂರ್ತಿಗಳು ಬಣ್ಣ ಕಳೆದುಕೊಂಡಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಯಾವ ಸಂಘಟನೆಗಳು, ಪ್ರತಿನಿಧಿಗಳು ಜನರ ನೆರವಿಗೆ ಬಂದಿಲ್ಲ ಎಂದು ಸ್ಥಳೀಯ ಉದ್ಯಮಿ ಎಂ.ಮಹೇಶ್ ಕುಮಾರ್ ದೂರಿದ್ದಾರೆ.







