ಫೆ.1ಕ್ಕೆ ಉಡುಪಿ ಜಿಲ್ಲಾ ಮಟ್ಟದ ಮೀನುಗಾರರ, ಮೀನು ಕಾರ್ಮಿಕರ ಸಮಾವೇಶ
ಉಡುಪಿ, ಜ.29: ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಬನ್ನಂಜೆಯ ಶಿವಗಿರಿ ಹಾಲ್‌ನಲ್ಲಿ ಫೆ.1ರ ಸೋಮವಾರ ಬೆಳಗ್ಗೆ 10:30ಕ್ಕೆ ನಡೆಯಲಿದೆ.
ಮೀನುಗಾರರಿಗೆ ಮತ್ತು ಮೀನು ಕಾರ್ಮಿಕ ಮಹಿಳೆಯರಿಗೆ ಸಾಮಾಜಿಕ ಭದ್ರತೆಯ ಭಾಗವಾಗಿ ಕಲ್ಯಾಣ ಮಂಡಳಿಯೊಂದನ್ನು ರಚಿಸಲು, ಬೀದಿ ಬದಿಯಲ್ಲಿ ಮೀನು ವ್ಯಾಪಾರ ಮಾಡುವ ಮಹಿಳೆಯರಿಗೆ ಶೆಡ್ಡುಗಳನ್ನು ಕಟ್ಟಿಸಿ, ಉದ್ಯೋಗ ದ್ರತೆ ನೀಡುವುದ ಜೊತೆಗೆ ಸೈಕಲ್,ಬೈಕ್‌ಗಳಲ್ಲಿ ವಿೂನು ಮಾರಾಟ ಮಾಡಲು ಅವಕಾಶ ನೀಡಿ, ಮನೆಗಳಿಗೆ ಹೋಗಿ ಮೀನು ಮಾರಾಟ ಮಾಡಲು ಅವಕಾಶ ಇರಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ನೀಡಲಾಗಿದೆ.
ಸೋಮವಾರ ನಡೆಯುವ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮುಖ್ಯ ಬೇಡಿಕೆ ಗಳ ಕುರಿತು ಮತ್ತು ಮುಂದಿನ ಹೋರಾಟದ ಕ್ರಮಗಳ ಬಗ್ಗೆ ಸೂಕ್ತ ನಿರ್ಣಯ ಗಳನ್ನು ಕೈಗೊಳ್ಳಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಸಮಾವೇಶವನ್ನು ಸಂಘದ ಅಧ್ಯಕ್ಷ ಕೆ. ಶಂಕರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರ್ಯ ಭಾಗವಹಿಸ ಲಿದ್ದಾರೆ. ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಡಿವೈಎಫ್ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್.ನರಸಿಂಹ, ಸಿಐಟಿಯು ಮುಖಂಡ ವೆಂಕಟೇಶ್ ಕೋಣಿ ಉಪಸ್ಥಿತ ರಿರುವರು ಎಂದು ಸಂಘದ ಕಾರ್ಯದರ್ಶಿ ಕವಿರಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







