ಹೊಳೆಯಲ್ಲಿ ಮುಳುಗಿ ಮೃತ್ಯು
ಕಾಪು, ಜ. 29: ಉದ್ಯಾವರ ಪಾಪನಾಶಿನಿ ಹೊಳೆಯಲ್ಲಿ ಕಪ್ಪೆ ಚಿಪ್ಪು ಹಿಡಿಯುಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಉದ್ಯಾವರ ಸಂಪಿಗೆನಗರದ ಆಸ್ಟೀನ್ ಮಚಾದೊ(41) ಎಂದು ಗುರುತಿಸಲಾಗಿದೆ. ಇವರು ಚಿತ್ರಕಲಾವಿದರಾಗಿದ್ದು, ಜ.28ರಂದು ಕಪ್ಪೆಚಿಪ್ಪು ಹಿಡಿಯಲೆಂದು ಮನೆಯಿಂದ ಉದ್ಯಾವರ ಗ್ರಾಮದ ಪಾಪನಾಶಿನಿ ಹೊಳೆಗೆ ಹೋಗಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಇವರ ಮೃತದೇಹ ಜ.29ರಂದು ಬೆಳಗ್ಗೆ ಉದ್ಯಾವರ ಸಂಪಿಗೆನಗರ ಬೋಬ್ಬರ್ಯ ಗುಡ್ಡೆಯ ಪಾಪನಾಶಿನಿ ಹೊಳೆಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





