2020ರಲ್ಲಿ 22,000 ಕೋಟಿ ಮಾಸ್ಕ್ ಗಳನ್ನು ರಫ್ತು ಮಾಡಿದ ಚೀನಾ
ಬೀಜಿಂಗ್ (ಚೀನಾ), ಜ. 29: ಚೀನಾ ಕಳೆದ ವರ್ಷ 22,000 ಕೋಟಿಗೂ ಅಧಿಕ ಮುಖಗವಸುಗಳನ್ನು ರಫ್ತು ಮಾಡಿದೆ ಎಂದು ದೇಶದ ವಾಣಿಜ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಈ ಮೂಲಕ, ಚೀನಾದ ಹೊರಗಿರುವ ಪ್ರತಿಯೊಬ್ಬ ವ್ಯಕ್ತಿ ಸುಮಾರು 40 ಮುಖಗವಸುಗಳನ್ನು ಹೊಂದಬಹುದಾಗಿತ್ತು.
ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ, ಜಗತ್ತಿನಾದ್ಯಂತ ಮುಖಗವಸುಗಳಿಗಾಗಿನ ಬೇಡಿಕೆ ಅಗಾಧ ಪ್ರಮಾಣದಲ್ಲಿ ಏರಿದ್ದಾಗ ಚೀನಾ ಅವುಗಳನ್ನು ಪೂರೈಸಿದೆ.
ಮುಖಗವಸುಗಳಿಗೆ ಹೆಚ್ಚುವರಿಯಾಗಿ, ಚೀನಾವು 2020ರಲ್ಲಿ 230 ಕೋಟಿ ರಕ್ಷಣಾ ಸಲಕರಣೆಗಳು ಮತ್ತು 100 ಕೋಟಿ ಪರೀಕ್ಷಾ ಕಿಟ್ಗಳನ್ನೂ ರಫ್ತು ಮಾಡಿತ್ತು ಎಂದು ಚೀನಾದ ಉಪ ವಾಣಿಜ್ಯ ಸಚಿವ ಕಿಯಾನ್ ಕೆಮಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
Next Story