ಚೀನಾ: ಮಾಜಿ ಬ್ಯಾಂಕ್ ಮುಖ್ಯಸ್ಥನಿಗೆ ಮರಣ ದಂಡನೆ

ಬೀಜಿಂಗ್ (ಚೀನಾ), ಜ. 29: ಚೀನಾ ಶುಕ್ರವಾರ ಭ್ರಷ್ಟಾಚಾರ ಆರೋಪದಲ್ಲಿ ಬ್ಯಾಂಕೊಂದರ ಮಾಜಿ ಉನ್ನತ ಅಧಿಕಾರಿಯೊಬ್ಬರನ್ನು ಗಲ್ಲಿಗೇರಿಸಿದೆ.
ಚೀನಾದ ಸರಕಾರಿ ಒಡೆತನದ ಬೃಹತ್ ಬ್ಯಾಂಕ್‌ಗಳ ಪೈಕಿ ಒಂದಾಗಿರುವ ಹುವರಾಂಗ್‌ನ ಮಾಜಿ ಅಧ್ಯಕ್ಷ ಲಾಯಿ ಶಾವೊಮಿನ್ ಮರಣ ದಂಡನೆಗೆ ಒಳಗಾದವರು. ಅವರ ವಿರುದ್ಧ 260 ಮಿಲಿಯ ಡಾಲರ್ (ಸುಮಾರು 1,893 ಕೋಟಿ ರೂಪಾಯಿ) ಲಂಚ ಪಡೆದಿರುವ, ಇತರ ವಿಧಾನಗಳಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಾಗೂ ಇಬ್ಬರು ಹೆಂಡತಿಯರನ್ನು ಹೊಂದಿರುವ ಆರೋಪಗಳನ್ನು ಹೊರಿಸಲಾಗಿದೆ ಎಂದು ಸರಕಾರಿ ಟಿವಿ ಚಾನೆಲ್ ಸಿಸಿಟಿವಿ ವರದಿ ಮಾಡಿದೆ.
ಅವರಿಗೆ ಉತ್ತರದ ನಗರ ಟಿಯಾನ್‌ಜಿನ್‌ನ ನ್ಯಾಯಾಲಯವೊಂದು ಇತ್ತೀಚೆಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿತ್ತು.
Next Story





