Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಕ್ರಮಗಳಿಗೆ ಸಕ್ರಮ ಮುದ್ರೆ

ಅಕ್ರಮಗಳಿಗೆ ಸಕ್ರಮ ಮುದ್ರೆ

ವಾರ್ತಾಭಾರತಿವಾರ್ತಾಭಾರತಿ30 Jan 2021 12:10 AM IST
share
ಅಕ್ರಮಗಳಿಗೆ ಸಕ್ರಮ ಮುದ್ರೆ

ಅಕ್ರಮಿಗಳನ್ನು ಸಕ್ರಮಿಗಳೆಂದು ಘೋಷಿಸುತ್ತಾ, ಪ್ರಗತಿಪರರನ್ನು, ಸಾಮಾಜಿಕ ಬದ್ಧತೆಯುಳ್ಳವರನ್ನು ಭಯೋತ್ಪಾದಕರು, ದುಷ್ಕರ್ಮಿಗಳು ಎಂದು ಘೋಷಿಸುವ ಮೂಲಕ ನ್ಯಾಯಾಲಯವೇ ಈ ದೇಶದಲ್ಲಿ ದುಷ್ಕರ್ಮಿಗಳನ್ನು ಪೋಷಿಸಲು ಮುಂದಾಗಿದೆಯೇ? ಎಂಬ ಆತಂಕ ಶ್ರೀಸಾಮಾನ್ಯರನ್ನು ಕಾಡುತ್ತಿದೆ. ದನಸಾಕುವ ಸಾಮಾನ್ಯ ರೈತರು, ವ್ಯಾಪಾರಿಗಳು ಇಂದು ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗುತ್ತಾರೆ ಮಾತ್ರವಲ್ಲ, ಪೊಲೀಸರಿಂದ ಕೇಸು ಜಡಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹಲ್ಲೆ ನಡೆಸಿದವರು ಸಮಾಜದಲ್ಲಿ ‘ಸಂಸ್ಕೃತಿ ರಕ್ಷಕರು’ ‘ಗೋ ರಕ್ಷಕರು’ ಎಂದು ಬಿಂಬಿಸಿಕೊಂಡು ಮುಕ್ತವಾಗಿ ಓಡಾಡುತ್ತಿದ್ದಾರೆ. ನ್ಯಾಯ ವ್ಯವಸ್ಥೆ ಮತ್ತು ಕಾನೂನು ವ್ಯವಸ್ಥೆಯ ಈ ದ್ವಂದ್ವಗಳಿಂದ ಸಮಾಜದಲ್ಲಿ ಕ್ರಿಮಿನಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ, ನೀಯತ್ತಿನಿಂದ ದುಡಿದು ಅಂದಂದಿನ ಬದುಕು ಸಾಗಿಸುತ್ತಿದ್ದವರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಯುವಕರಿಗೆ ಕ್ರಿಮಿನಲ್ ಚಟುವಟಿಕೆಗಳ ಕಡೆಗೆ ಆಕರ್ಷಣೆ ಹೆಚ್ಚುತ್ತಿದೆ. ನ್ಯಾಯಾಲಯದ ಆತಂಕಕಾರಿ ತೀರ್ಪುಗಳು ಮಹಿಳೆಯರ ಬದುಕಿನ ಮೇಲೂ ಚೆಲ್ಲಾಟ ನಡೆಸುತ್ತಿವೆ.

ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿರುವ ದಿನಗಳಲ್ಲೇ, ಇಂತಹ ದೌರ್ಜನ್ಯ ಎಸಗುವ ಆರೋಪಿಗಳನ್ನು ರಕ್ಷಿಸುವ ಬಗ್ಗೆ ನ್ಯಾಯಾಲಯ ಆಸಕ್ತಿಯನ್ನು ತೋರಿಸುತ್ತಿವೆ. ಇತ್ತೀಚೆಗೆ ಬೆನ್ನು ಬೆನ್ನಿಗೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಸಮರ್ಥಿಸುವಂತಹ ತೀರ್ಪುಗಳು ಹೊರ ಬೀಳುತ್ತಿರುವುದು ಈ ದೇಶದ ಮಹಿಳೆಯರನ್ನು ಆಘಾತಕ್ಕೆ ತಳ್ಳಿವೆ. ಬಾಂಬೆ ಹೈಕೋರ್ಟ್ ನ್ಯಾಯಾಧೀಶೆ ಪುಷ್ಪಾ ಗಾನೇಡಿವಾಲಾ ಅವರು ತೀರಾ ಇತ್ತೀಚೆಗೆ, ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ನಡೆದ ಅತ್ಯಾಚಾರದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ದೋಷಮುಕ್ತಗೊಳಿಸಿದ್ದರು. ಒಂದು ಪ್ರಕರಣದಲ್ಲಿ, ಆರೋಪಿ 12 ವರ್ಷದ ಬಾಲಕಿಯ ಎದೆಯನ್ನು ಸ್ಪರ್ಶಿಸಿದ್ದ. ‘ಆರೋಪಿಯು ಬಾಲಕಿಯ ಬರಿ ಮೈಯ ಸಂಪರ್ಕ ಹೊಂದದೆ ಇರುವುದರಿಂದ ಅದನ್ನು ಲೈಂಗಿಕ ಹಲ್ಲೆ’ಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಘೋಷಿಸಿದರು. ಅಂದರೆ ಈ ಮೂಲಕ ನ್ಯಾಯಾಧೀಶರು, ಬರಿ ಮೈ ಹೊರತು ಪಡಿಸಿ, ಬಟ್ಟೆಯನ್ನು ಧರಿಸಿದ ತರುಣಿಯನ್ನು ಸ್ಪರ್ಶಿಸುವ ಅವಕಾಶವನ್ನು ಪರೋಕ್ಷವಾಗಿ ನೀಡಿದ್ದಾರೆ. ಅಷ್ಟೇ ಅಲ್ಲ, ಇದೇ ನ್ಯಾಯಾಧೀಶರು, ಇನ್ನೊಂದು ಪ್ರಕರಣದಲ್ಲಿ, ‘ಐದು ವರ್ಷದ ಬಾಲಕಿಯ ಕೈಗಳನ್ನು ಹಿಡಿದುಕೊಳ್ಳುವುದು ಹಾಗೂ ಪ್ಯಾಂಟ್‌ನ ಝಿಪ್ ಜಾರಿಸುವುದನ್ನು ಪೊಸ್ಕೊ ಕಾಯ್ದೆಯಡಿ ಲೈಂಗಿಕ ಆಕ್ರಮಣವೆಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದೂ ಅಭಿಪ್ರಾಯಿಸಿದ್ದರು. ಇನ್ನೆರಡು ತೀರ್ಪುಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಅತ್ಯಾಚಾರಗೈದ ಇಬ್ಬರು ಆರೋಪಿಗಳನ್ನು ವಿಶ್ವಾಸಾರ್ಹ ಪುರಾವೆಯ ಕೊರತೆಯ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಿದ್ದರು.

‘‘ಆರೋಪಿಗಳ ದೋಷಿತ್ವವನ್ನು ದೃಢಪಡಿಸಲು ಸಂತ್ರಸ್ತೆ ನೀಡುವ ಸಾಕ್ಷವು ಸಾಕಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದಾಗ್ಯೂ, ಆ ಸಾಕ್ಷವು ನ್ಯಾಯಾಲಯಕ್ಕೆ ಆತ್ಮವಿಶ್ವಾಸವನ್ನು ಮೂಡಿಸುವಷ್ಟು ಸ್ಫೂರ್ತಿದಾಯಕವಾಗಿರಬೇಕು. ಈ ಪ್ರಕರಣದಲ್ಲಿ ಹಾಗಾಗಿಲ್ಲ’’ ಎಂದು ಅವರು ತೀರ್ಪೊಂದರಲ್ಲಿ ತಿಳಿಸಿದ್ದರು.ಎರಡನೇ ತೀರ್ಪಿನಲ್ಲಿ ಅವರು ‘‘ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬಳೇ ನೀಡುವ ಸಾಕ್ಷದಿಂದಲೇ ಆರೋಪಿಯ ಮೇಲೆ ಕ್ರಿಮಿನಲ್ ಅಪರಾಧದ ಹೊಣೆಗಾರಿಕೆಯನ್ನು ಹೊರಿಸಬಹುದಾಗಿದೆ. ಆದರೆ ಹಾಲಿ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಸಾಕ್ಷಿ ನೀಡಿರುವ ಕಳಪೆ ಗುಣಮಟ್ಟದ ಸಾಕ್ಷಿಯನ್ನು ಪರಿಗಣನೆಗೆ ತೆಗೆದುಕೊಂಡು, ಅಪೀಲುದಾರನನ್ನು 10 ವರ್ಷಗಳ ಕಾಲ ಜೈಲಿಗೆ ಕಳುಹಿಸುವುದು ಘೋರ ಅನ್ಯಾಯವಾಗುತ್ತದೆ’’ ಎಂದು ಅವರು ಹೇಳಿದ್ದರು.

ಜನವರಿ 15ರಂದು ಪ್ರಕರಣವೊಂದಕ್ಕೆ ಸಂಬಂಧಿಸಿ ನೀಡಿದ ತೀರ್ಪಿನಲ್ಲಿ ಪುಷ್ಪಾ ಅವರು ‘‘ಒಬ್ಬನೇ ವ್ಯಕ್ತಿಯು ಸಂತ್ರಸ್ತೆಯನ್ನು ಯಾವುದೇ ಪ್ರತಿರೋಧವಿಲ್ಲದೆ ವಿವಸ್ತ್ರಳನ್ನಾಗಿಸಲು ಹೇಗೆ ಸಾಧ್ಯ?’’ ಎಂದು ಪ್ರಶ್ನಿಸಿದ್ದರು. 15 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರವೆಸಗಿದ ಆರೋಪದಲ್ಲಿ ಕೆಳ ನ್ಯಾಯಾಲಯವು ತನಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸೂರತ್ ಕಾಸರ್‌ಕರ್ ಎಂಬಾತ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ಬಳಿಕ ಪುಷ್ಪಾ ಅವರು ಈ ತೀರ್ಪು ನೀಡಿದ್ದರು. ಜನವರಿ 14ರಂದು ನ್ಯಾಯಮೂರ್ತಿ ಪುಷ್ಪಾ ಅವರು, 27 ವರ್ಷದ ಜೋಗೇಶ್ವರ್ ಕಾವಳೆ ಎಂಬಾತ 17 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರವೆಸಗಿದ ಅಪರಾಧಕ್ಕಾಗಿ ತನಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದರು. ಆರೋಪಿಯು ಬಾಲಕಿಯನ್ನು ತನ್ನ ಸಹೋದರಿಯ ಮನೆಗೆ ಕೊಂಡೊಯ್ದು ಎರಡು ತಿಂಗಳುಗಳ ಕಾಲ ಲೈಂಗಿಕ ಸಂಪರ್ಕ ಬೆಳೆಸಿದ್ದನೆಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪುಷ್ಪಾ ಅವರು ‘ಅವಿವಾಹಿತ ಯುವಕ ಹಾಗೂ ಬಾಲಕಿಯನ್ನು ಕುಟುಂಬದ ಇತರ ಸದಸ್ಯರು ಜೊತೆಯಾಗಿ ಉಳಿದುಕೊಳ್ಳಲು ಯಾಕೆ ಅವಕಾಶ ನೀಡಿದರು?’ ಎಂದು ಅಚ್ಚರಿ ವ್ಯಕ್ತಪಡಿಸಿದರು ಹಾಗೂ ‘ಇಂತಹ ವಾತಾವರಣದಲ್ಲಿ ಖಾಸಗಿಯಾಗಿ ಲೈಂಗಿಕ ಸಂಪರ್ಕ ಬೆಳೆಸಲು ಸಂತ್ರಸ್ತೆ ಹಾಗೂ ಆರೋಪಿಗೆ ಹೇಗೆ ಸಾಧ್ಯವಾಯಿತು’ ಎಂದವರು ಪ್ರಶ್ನಿಸಿದ್ದರು.

ಮೇಲಿನ ತೀರ್ಪುಗಳನ್ನು ನೀಡಿದ್ದು ಪುರುಷ ನ್ಯಾಯಾಧೀಶನಲ್ಲ, ಬದಲಿಗೆ ಓರ್ವ ಮಹಿಳೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಯಾವೆಲ್ಲ ರೀತಿಯಲ್ಲಿ ನಡೆಸಬಹುದು ಎನ್ನುವುದನ್ನು ಮಹಿಳೆಯಾಗಿ ಅವರಿಗೆ ಪ್ರತ್ಯೇಕವಾಗಿ ಮನವರಿಕೆ ಮಾಡುವ ಅಗತ್ಯವಿರಲಿಲ್ಲ. ಆದರೂ ಈ ದೌರ್ಜನ್ಯ ಪ್ರಕರಣಗಳಲ್ಲಿ ಅವರು ಸಂತ್ರಸ್ತೆಯನ್ನೇ ಅಪರಾಧಿಯನ್ನಾಗಿಸಲು ಪ್ರಯತ್ನಿಸಿದರು. ಇತ್ತೀಚಿನ ದಿನಗಳಲ್ಲಿ, ಉತ್ತರ ಪ್ರದೇಶವೂ ಸೇರಿದಂತೆ ವಿವಿಧೆಡೆ ನಡೆದ ಅತ್ಯಾಚಾರಗಳಲ್ಲಿ ಸಂತ್ರಸ್ತ ಕುಟುಂಬಗಳನ್ನೇ ಪೊಲೀಸರು ಆರೋಪಿಗಳನ್ನಾಗಿಸುವುದನ್ನು ನಾವು ನೋಡುತ್ತಿದ್ದೇವೆ. ಸಂತ್ರಸ್ತರನ್ನು ಬೆದರಿಸುವುದು, ಅವರ ಚಾರಿತ್ರದ ಕುರಿತಂತೆ ಮಾಧ್ಯಮಗಳಿಗೆ ತಪ್ಪು ಮಾಹಿತಿಗಳನ್ನು ನೀಡುವುದು, ಆ ಮೂಲಕ ಅತ್ಯಾಚಾರಗಳಿಗೆ ಸಂತ್ರಸ್ತ ಮಹಿಳೆಯರೇ ಕಾರಣವೆನ್ನುವುದನ್ನು ಘೋಷಿಸುವುದು ನಡೆಯುತ್ತಿವೆ. ‘ಮಹಿಳೆಯರು ಬಟ್ಟೆಬರೆ, ವರ್ತನೆ ಇತ್ಯಾದಿಗಳಲ್ಲಿ ಸರಿಯಾಗಿದ್ದರೆ ಅತ್ಯಾಚಾರಗಳು ನಡೆಯುವುದಿಲ್ಲ. ಅದರಲ್ಲಿ ಅವರು ತಪ್ಪಿದರೆ ಪುರುಷರಿಂದ ಅತ್ಯಾಚಾರಕ್ಕೊಳಗಾಗುತ್ತಾರೆ’ ಎನ್ನುವ ಮನಸ್ಥಿತಿಯೊಂದು ದೇಶಾದ್ಯಂತ ಬೆಳೆಯುತ್ತಿದೆ.

ಇದೀಗ ನ್ಯಾಯಾಲಯವು ಅದಕ್ಕೆ ಪೂರಕವಾದ ತೀರ್ಪುಗಳನ್ನು ನೀಡುವ ಮೂಲಕ, ಅತ್ಯಾಚಾರಗಳನ್ನೂ ಮಾನ್ಯಗೊಳಿಸಲು ಮುಂದಾಗಿದೆ. ಒಂದೆಡೆ ಅತ್ಯಾಚಾರದ ನೋವು, ಮಗದೊಂದೆಡೆ ನ್ಯಾಯಾಲದಲ್ಲೂ ತನಗೆ ನ್ಯಾಯ ಸಿಗದ ನೋವು, ಹೀಗೆ ಎರಡೆರಡು ಬಾರಿ ಆಕೆ ಅತ್ಯಾಚಾರಕ್ಕೀಡಾಗಬೇಕಾದ ಪ್ರಸಂಗ ಎದುರಾಗುತ್ತವೆ. ಇಂತಹ ತೀರ್ಪುಗಳು ಆರೋಪಿಗಳಲ್ಲಿ ಅತ್ಯಾಚಾರವೆಸಗುವ, ಲೈಂಗಿಕ ದೌರ್ಜನ್ಯವೆಸಗುವ ಮನಸ್ಥಿತಿಯನ್ನು ಬೆಳೆಸುತ್ತವೆೆ. ಭಾರತೀಯ ಸಂಸ್ಕೃತಿ ಮತ್ತೆ ಪುನರುಜ್ಜೀವಗೊಳ್ಳುತ್ತಿದೆ ಎಂಬ ಸಂಘಪರಿವಾರದ ಘೋಷಣೆಗಳಿಗೂ, ಇಂತಹ ತೀರ್ಪುಗಳಿಗೂ ಪರಸ್ಪರ ಸಂಬಂಧವಿದೆಯೇ ಎಂಬ ಚರ್ಚೆಯನ್ನು ನಾವು ಕೈಗೆತ್ತಿಕೊಳ್ಳಬೇಕಾಗಿದೆ. ಮನುವಾದ ಹೆಣ್ಣಿನ ಕುರಿತಂತೆ ತಳೆದಿರುವ ನಿಲುವು, ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣನ್ನು ನೋಡುವ ದೃಷ್ಟಿಕೋನ ನ್ಯಾಯ ವಿಚಾರಣೆಯ ಸಂದರ್ಭದಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತಿದೆಯೇ? ಎಂಬ ಪ್ರಶ್ನೆ ನಾಡಿನ ಚಿಂತಕರನ್ನು ಕಾಡುತ್ತಿದೆ. ನ್ಯಾಯಾಲಯದಿಂದ ಮಹಿಳೆಯ ವಿರುದ್ಧ ಹೊರಬಿದ್ದಿರುವ ಈ ಎರಡು ತೀರ್ಪುಗಳ ಆಧಾರದಲ್ಲಿ ಹೇಳುವುದಾದರೆ, ಭಾರತ ಮತ್ತೆ ವರ್ಣ ವ್ಯವಸ್ಥೆ, ಊಳಿಗಮಾನ್ಯ ವ್ಯವಸ್ಥೆಯ ಕಡೆಗೆ ಹೊರಳುತ್ತಿದೆ. ನ್ಯಾಯಾಲಯಗಳು ಮನು ಸಂವಿಧಾನವನ್ನು ಮುಂದಿಟ್ಟು ತೀರ್ಪುಗಳನ್ನು ನೀಡಲು ಹೊರಟಿವೆ. ಅದರ ಬಲಿಪಶುಗಳು ರೈತರು, ದಲಿತರು, ಅಲ್ಪಸಂಖ್ಯಾತರು ಮಾತ್ರವಲ್ಲ, ಮಹಿಳೆಯರು ಕೂಡ ಎನ್ನುವ ಅಂಶವನ್ನು ಈ ತೀರ್ಪುಗಳಿಂದ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X