ರೈತರು ಪ್ರತಿಭಟನೆ ನಡೆಸುತ್ತಿರುವ ಪ್ರಮುಖ ಸ್ಥಳಗಳಲ್ಲಿ 2 ದಿನ ಇಂಟರ್ನೆಟ್ ಸ್ಥಗಿತ: ಗೃಹ ಇಲಾಖೆ

ಹೊಸದಿಲ್ಲಿ,ಜ.30 ರೈತರು ಪ್ರತಿಭಟನೆ ನಡೆಸುತ್ತಿರುವ ಪ್ರಮುಖ ಸ್ಥಳಗಳಾದ ಸಿಂಘು, ಗಾಝಿಪುರ ಹಾಗೂ ಟಿಕ್ರಿ ಬಾರ್ಡರ್ ಗಳಲ್ಲಿ 2 ದಿನಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸುವಂತೆ ಗೃಹ ಇಲಾಖೆ ಸೂಚನೆ ಹೊರಡಿಸಿದ್ದಾಗಿ ndtv.com ವರದಿ ತಿಳಿಸಿದೆ. ಶುಕ್ರವಾರ ರಾತ್ರಿ 11 ಗಂಟೆಯ ಬಳಿಕ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
"ಗಾಝಿಪುರ್, ಟಿಕ್ರಿ ಮತ್ತು ಸಿಂಘು ಬಾರ್ಡರ್ ನಲ್ಲಿ ಇಂಟರ್ನೆಟ್ ಸೇವೆಯನು ಸ್ಥಗಿತಗೊಳಿಸಬೇಕಾದ ಅವಶ್ಯಕತೆ ಇದೆ. ಗಲಭೆ ಪೀಡಿತ ಪ್ರದೇಶಗಳಲ್ಲೆಲ್ಲಾ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಜನವರಿ 29 ರಿಂದ 31ರವರೆಗೆ ಇಂಟರ್ನೆಟ್ ಸ್ಥಗಿತಗೊಳಿಸಲಾಗುವುದು ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಗಾಝಿಪುರ ಬಾರ್ಡರ್ ನಲ್ಲಿದ್ದ ರೈತರನ್ನು ಕೂಡಲೇ ತೆರವುಗೊಳಿಸುವಂತೆ ಉತ್ತರಪ್ರದೇಶ ಸರಕಾರ ಆದೇಶ ಹೊರಡಿಸಿತ್ತು. ವಿದ್ಯುತ್ ಸಂಪರ್ಕ ಮತ್ತು ನೀರಿನ ವ್ಯವಸ್ಥೆಗೂ ಸರಕಾರ ಅನುಮತಿ ನೀಡಿರಲಿಲ್ಲ ಎಂದು ವರದಿ ಉಲ್ಲೇಖಿಸಿದೆ.
Next Story





