ಕಡೇಶಿವಾಲಯ ರೋಟರಿ ಸಮುದಾಯ ದಳದಿಂದ 'ಜನ ಸಂಪರ್ಕ ಸಭೆ'

ಬಂಟ್ವಾಳ, ಜ.30: ಭ್ರಷ್ಟಾಚಾರ ನಿಗ್ರಹ ದಳ, ಮಂಗಳೂರು ಇದರ ವತಿಯಿಂದ ಕಡೇಶಿವಾಲಯದ ರೋಟರಿ ಸಮುದಾಯ ದಳ ಇದರ ಸಹಕಾರದೊಂದಿಗೆ ‘ಜನ ಸಂಪರ್ಕ ಸಭೆ’ಯು ಶುಕ್ರವಾರ ಮಧ್ಯಾಹ್ನ ಕಡೇಶಿವಾಲಯದಲ್ಲಿ ನಡೆಯಿತು.
ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಎಸಿಬಿ ಡಿವೈಎಸ್ಪಿ ಪೊಲೀಸ್ ಉಪಾಧ್ಯಕ್ಷ ಕೆ.ಸಿ.ಪ್ರಕಾಶ್ ಮತ್ತು ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಮತ್ತು ಗುರುರಾಜ್ ಭಾಗವಹಿಸಿದ್ದರು.
ರೋಟರಿ ಸಮುದಾಯ ದಳದ ಸತೀಶ್ಚಂದ್ರ ಶೆಟ್ಟಿ ಮತ್ತು ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಎಸಿಬಿಯ ಕೆ.ಕೆ.ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿದರು. ಸೋಮಸುಂದರ್ ವಂದಿಸಿದರು. ಧನುಷ್ ಪೆರ್ಲಾಪು ಕಾರ್ಯಕ್ರಮ ನಿರೂಪಿಸಿದರು.
Next Story









