Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮೀನುಗಾರಿಕೆಗೆ ದಕ್ಕೆ ತರುವ ಮರೀನಾಗೆ...

ಮೀನುಗಾರಿಕೆಗೆ ದಕ್ಕೆ ತರುವ ಮರೀನಾಗೆ ವಿರೋಧ: ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆ

ವಾರ್ತಾಭಾರತಿವಾರ್ತಾಭಾರತಿ30 Jan 2021 7:37 PM IST
share
ಮೀನುಗಾರಿಕೆಗೆ ದಕ್ಕೆ ತರುವ ಮರೀನಾಗೆ ವಿರೋಧ: ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆ

ಉಡುಪಿ, ಜ.30: ಮಲ್ಪೆ ಪಡುಕೆರೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮರೀನಾ ಬಗ್ಗೆ ಇಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆ ಗಳು ನಡೆದವು. ಮೀನುಗಾರಿಕೆಗೆ ತೊಂದರೆ ಆಗುವುದಾದರೆ ಯೋಜನೆಯನ್ನು ವಿರೋಧಿಸುವುದಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗಿರೀಶ್ ಕಾಂಚನ್, ಮರೀನಾ ಬಗ್ಗೆ ಸಭೆಗೆ ಸರಿಯಾದ ಮಾಹಿತಿ ನೀಡುವಂತೆ ಶಾಸಕ ರಘುಪತಿ ಭಟ್ ಅವರಲ್ಲಿ ಮನವಿ ಮಾಡಿದರು. ಪಡುಕೆರೆಯ ಶಾಂತಿ ನಗರದಲ್ಲಿರುವ 16 ಎಕರೆ ಸರಕಾರ ಜಾಗ ಬಿಟ್ಟರೆ ಬೇರೆ ಯಾವುದೇ ಜಾಗವನ್ನು ಮರೀನಾಕ್ಕೆ ಬಳಸಿಕೊಳ್ಳುದಿಲ್ಲ. ಯಾರನ್ನು ಕೂಡ ಒಕ್ಕಲೆಬ್ಬಿಸುವುದಿಲ್ಲ. ಡಿಪಿಆರ್‌ನಲ್ಲಿ ಸಾಧಕ ಬಾಧಕಗಳನ್ನು ತಿಳಿದುಕೊಳ್ಳಲಾಗುದು ಎಂದು ಶಾಸಕರು ತಿಳಿಸಿದರು.

ಮಲ್ಪೆ ವಡಭಾಂಡೇಶ್ವರ ವಾರ್ಡ್‌ನ ಬಿಜೆಪಿ ಸದಸ್ಯ ಯೋಗೀಶ್ ಸಾಲ್ಯಾನ್ ಮಾತನಾಡಿ, ಮೀನುಗಾರರ ಮುಖವಾಡ ಹಾಕಿ ಕೊಂಡಿರುವ ಹೊರಗಿನಿಂದ ಬಂದ ಕೆಲವು ಮುಖಂಡರು ಶಾಸಕರ ದಾರಿ ತಪ್ಪಿಸುತ್ತಿದ್ದಾರೆ. ಜಿಲ್ಲೆಯ ಆದಾಯಕ್ಕೆ ಮೀನುಗಾರರ ಬಹಳ ದೊಡ್ಡ ಕೊಡುಗೆ ಇದೆ. ಆ ಮೀನುಗಾರಿಕೆಗೆ ದಕ್ಕೆ ಬಾರದ ರೀತಿಯಲ್ಲಿ ಯೋಜನೆ ತಂದರೆ ನಾನು ಇಲ್ಲಿಯೇ ಸ್ವಾಗತಿಸು ತ್ತೇನೆ. ಇಲ್ಲದಿದ್ದರೆ ಇದನ್ನು ವಿರೋಧಿಸುತ್ತೇನೆ ಎಂದು ತಿಳಿಸಿದರು.

ರಮೇಶ್ ಕಾಂಚನ್ ಮಾತನಾಡಿ, ನಾಗಾರ್ಜುನ, ಎಂಆರ್‌ಪಿಎಲ್ ಯೋಜನೆಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ ಮೀನು ಗಾರರಿಗೆ ಕೊನೆಗೆ ಸಿಕ್ಕಿದ್ದು ಚಿಪ್ಪಿ ಮಾತ್ರ. ಇದರಲ್ಲಿ ಆ ರೀತಿ ಆಗಬಾರದು ಎಂದರು. ಬೀಚ್ ಟೆಂಡರ್ ನೀಡಿದ ಬಳಿಕ ವಾಟರ್ ಸ್ಪೋರ್ಟ್‌ನಿಂದಾಗಿ ಕೈರಂಪಣಿ ಮೀನುಗಾರಿಕೆಗೆ ದೊಡ್ಡ ಹೊಡೆತ ಬಿದ್ದಿದೆ. ನಮ್ಮ ಮೀನುಗಾರಿಕೆ ಆರಂಭ ವಾಗುವುದೇ ಕೈರಂಪಣಿಯಿಂದ. ಆದರೆ ಇಂದು ಅದಕ್ಕೆ ಅವಕಾಶ ಇಲ್ಲ ದಂತಾಗಿದೆ ಎಂದು ಯೋಗೀಶ್ ಸಾಲ್ಯಾನ್ ತಿಳಿಸಿದರು.

ಕಾಮಗಾರಿ ವಿಳಂಬಕ್ಕೆ ತರಾಟೆ: ನಿಟ್ಟೂರು ತ್ಯಾಜ್ಯ ಶುದ್ದೀಕರಣ ಘಟಕದ ಕಾಮಗಾರಿಯು ಕಳೆದ ಮೂರು ತಿಂಗಳಿನಿಂದ ಆರಂಭಿಸದ ಪರಿಣಾಮ ಇಂದ್ರಾಣಿ ಹೊಳೆ ಸಂಪೂರ್ಣ ಕಲುಷಿತವಾಗಿದೆ ಎಂದು ಆರೋಪಿಸಿ ಸ್ಥಳೀಯ ಸದಸ್ಯರು, ಈ ಬಗ್ಗೆ ಸಭೆಯಲ್ಲಿ ಗದ್ದಲ ಎಬ್ಬಿಸಿ, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನಿಟ್ಟೂರು ಸದಸ್ಯ ಸಂತೋಷ್ ಜತ್ತನ್ ಮಾತನಾಡಿ, ಅಧಿಕಾರಿಗಳು ಗುತ್ತಿಗೆ ದಾರರೊಂದಿಗೆ ಶಾಮೀಲಾಗಿದ್ದು, ಇನ್ನು ಕೆಲಸ ಆರಂಭಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಒಳಚರಂಡಿಯ ತ್ಯಾಜ್ಯ ನೀರು ನೇರವಾಗಿ ಬಿಡುತ್ತಿರುವುದರಿಂದ ಕಲ್ಸಂಕದಿಂದ ಕಲ್ಮಾಡಿವರೆಗಿನ ಹೊಳೆ ನೀರು ಹಾಳಾಗಿದೆ ಎಂದು ದೂರಿದರು.

ಪ್ರಭಾವಿ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ರಮೇಶ್ ಕಾಂಚನ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್‌ರಾಜ್, ಸದನ ತೆಗೆದುಕೊಳ್ಳುವ ನಿರ್ಧಾರದಂತೆ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದು ಕೊಳ್ಳಲು ನಾವು ಬದ್ಧ ಎಂದು ತಿಳಿಸಿದರು.

ಈ ಬಗ್ಗೆ ಸದಸ್ಯರ ಮಧ್ಯೆ ತೀವ್ರ ಚರ್ಚೆಗಳು ನಡೆದವು. 15 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ನಂತರ ಈ ವಿಚಾರದ ಚರ್ಚೆಗೆ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಬೀಚ್‌ನಲ್ಲಿ ಹಗಲು ದರೋಡೆ: ಮಲ್ಪೆ ಬೀಚ್‌ನ ದ್ವಾರದಲ್ಲಿ ಮನೆಯ ಕಾರ್ಯಕ್ರಮಕ್ಕೆ ಹೋಗುವವರಿಂದಲೂ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ನಡೆದುಕೊಂಡು ಹೋಗುವವರಿಂದಲೂ ಹಣ ಪಡೆಯುತ್ತಿದ್ದಾರೆ. ಈ ಬಗ್ಗೆ ಯಾರು ಕೂಡ ಕೇಳುವವರಿಲ್ಲ ಎಂದು ಸದಸ್ಯರಾದ ರಮೇಶ್ ಕಾಂಚನ್, ಯೋಗೀಶ್ ಸಾಲ್ಯಾನ್ ಆರೋಪಿಸಿದರು.

ಟೆಂಡರ್‌ನಲ್ಲಿ ನಿಗದಿಪಡಿಸಿದಕ್ಕಿಂತ ದುಪ್ಪಟ್ಟು ಹಣವನ್ನು ವಾಹನ ಸವಾರ ರಿಂದ ವಸೂಲಿ ಮಾಡಲಾಗುತ್ತಿದೆ ಎಂದು ಸದಸ್ಯರು ದೂರಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಉದಯ ಕುಮಾರ್, ಈ ರೀತಿ ಹಣ ವಸೂಲಿ ಮಾಡುವವರ ವಿರುದ್ಧ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದರು.

ಮಲ್ಪೆಯಲ್ಲಿ ಇನ್ನೊಂದು ಬೀಚ್ ಅಭಿವೃದ್ಧಿ ಸಮಿತಿಯನ್ನು ಹುಟ್ಟು ಹಾಕ ಲಾಗಿದೆ. ಈ ಬಗ್ಗೆ ಅಭಿವೃದ್ಧಿ ಸಮಿತಿಯ ಸಭೆಯನ್ನು ಶೀಘ್ರವೇ ಕರೆಯಬೇಕು ಎಂದು ಯೋಗೀಶ್ ಸಾಲ್ಯಾನ್ ಒತ್ತಾಯಿಸಿದರು. 15 ದಿನಗಳೊಳಗೆ ಜಿಲ್ಲಾ ಧಿಕಾರಿ ಮೂಲಕ ಸಭೆ ಕರೆಯಲಾಗುವುದೆಂದು ಪೌರಾಯುಕ್ತರು ಹೇಳಿದರು.

ಮಣಿಪಾಲ, ಈಶ್ವರನಗರ, ಬೈಲೂರು ದೊಡ್ಡಣಗುಡ್ಡೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಿರುವ ಬಗ್ಗೆ ಸಭೆಯಲ್ಲಿ ಸದಸ್ಯ ರಾದ ಕಲ್ಪನಾ, ವಿಜಯ ಲಕ್ಷ್ಮೀ, ರಮೇಶ್ ಕಾಂಚನ್, ಪ್ರಭಾಕರ ಪೂಜಾರಿ ಪ್ರಸ್ತಾಪಿಸಿದರು. ಮಣಿಪಾಲ ಮಣ್ಣಪಳ್ಳದಲ್ಲಿ ನಡೆಯು ತ್ತಿರುವ ಅನೈತಿಕ ಚಟುವಟಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯೆ ಕಲ್ಪನಾ ಒತ್ತಾಯಿಸಿದರು.

ನೀರನ್ನು ಅನವಶ್ಯಕವಾಗಿ ಬಳಸಬೇಡಿ

ಫೆಬ್ರವರಿ ತಿಂಗಳಲ್ಲಿ ಬಜೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಲಿರುವುದ ರಿಂದ ನಾಗರಿಕರು ಕುಡಿಯುವ ನೀರನ್ನು ತೋಟ, ವಾಹನ ತೊಳೆಯಲು ಬಳಸಿಕೊಳ್ಳಬಾರದು. ಇಲ್ಲದಿದ್ದರೆ ನೀರಿನ ಸಮಸ್ಯೆ ಮುಂದೆ ಹೆಚ್ಚು ತೀವ್ರವಾಗ ಲಿದೆ ಎಂದು ಅಧ್ಯಕ್ಷೆ ಸುಮಿತ್ರಾ ನಾಯಕ್ ಮನವಿ ಮಾಡಿದರು.

ರಸ್ತೆ ಬದಿಯಲ್ಲಿ ಕಸ ಎಸೆಯುವವರಿಗೆ ಜನವರಿ ತಿಂಗಳಿನಿಂದ 5ಸಾವಿರ ರೂ.ನಿಂದ 50ಸಾವಿರ ರೂ.ವರೆಗೆ ದಂಡ ವಿಧಿಸಲಾಗು ತ್ತಿದ್ದು, ಈವರೆಗೆ 1.23ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. 20ವರ್ಷ ಹಿಂದಿನ ಒಳ ಚರಂಡಿಯು ಸಂಪೂರ್ಣ ಶಿಥಿಲಾವಸ್ಥೆ ಯಲ್ಲಿದ್ದು, ಅದರ ದುರಸ್ತಿಗೆ ಡಿಪಿಆರ್ ಸಿದ್ಧಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X