ಈ ಬಾರಿ ಯುಗಾದಿಗೆ ಹೊಸ ಮುಖ್ಯಮಂತ್ರಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ, ಜ.30: ಈ ಬಾರಿಯ ಯುಗಾದಿ ಹಬ್ಬಕ್ಕೆ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ಮಂತ್ರಿ ಸ್ಥಾನ ನೀಡಿರಿ ಎಂದು ಮುಖ್ಯಮಂತ್ರಿ ಅವರನ್ನು ದುಂಬಾಲು ಬೀಳುವುದಿಲ್ಲ. ಆದರೆ, ಕೆಲವೇ ದಿನದಲ್ಲಿ ಮಂತ್ರಿ ಸ್ಥಾನ ನೀಡುವವರೆ ಬರುತ್ತಾರೆ. ಅವರು ಉತ್ತರ ಕರ್ನಾಟಕದ ಭಾಗದವರೇ ಆಗಲಿದ್ದು, ಕಾದು ನೋಡಿ ಎಂದರು.
ಶಿವಮೊಗ್ಗದ ಹುಣಸೋಡು ಸ್ಫೋಟ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಇದು ಗಂಭೀರ ಪ್ರಕರಣವಾಗಿದ್ದು, ಸಿಬಿಐ ತನಿಖೆಗೆ ವಹಿಸಬೇಕಾಗಿತ್ತು. ಒಂದು ವೇಳೆ ಅಂತಹ ಸ್ಪೋಟ ಶಿವಮೊಗ್ಗ ನಗರದೊಳಗೆ ಆಗಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.
ಶಿವಮೊಗ್ಗದ ಅಕ್ರಮ ಗಣಿಗಾರಿಕೆಯಲ್ಲಿ ಯಾವ ರಾಜಕಾರಣಿ ಪಾಲುದಾರಿಕೆ ಇದೆ ಎಂಬುದು ಬಯಲಾಗಬೇಕು. ಆ ಸ್ಫೋಟಕ ವಸ್ತು ಎಲ್ಲಿಂದ ಬಂತು, ಯಾರು ಇದಕ್ಕೆ ಕಾರಣ ಎಂಬುದು ಅಮೂಲಾಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
Next Story





