ಉಡುಪಿ: ಪೈಪ್ ದುರಸ್ತಿ ಕಾಮಗಾರಿ; ವಾಹನ ಸಂಚಾರಕ್ಕೆ ಬದಲಿ ಮಾರ್ಗ
ಉಡುಪಿ, ಜ.30: ಉಡುಪಿ ನಗರಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿರುವ ನಗರಸಭಾ ಅಧೀನದ ವೆಟ್‌ವೆಲ್-3ರ ಯುಜಿಡಿ ಪೈಪ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ, ಜ.30ರಿಂದ ಫೆ.10ರವರೆಗೆ ಎನ್.ಹೆಚ್.66 ಮಂಗಳೂರು-ಕುಂದಾಪುರ ರಸ್ತೆಯ ಎಡಬದಿ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ, ಬಲಬದಿ ರಸ್ತೆಯಲ್ಲಿ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
Next Story





