ಉಡುಪಿ ಮಲಬಾರ್ ಗೋಲ್ಡ್ ನಲ್ಲಿ ಜೆಮ್ಸ್ ಸ್ಟೋನ್ ಜುವೆಲ್ಲರಿ ಅನಾವರಣ

ಉಡುಪಿ, ಜ.30: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಜೆಮ್ಸ್ ಸ್ಟೋನ್ ಜುವೆಲ್ಲರಿ ಫೆಸ್ಟಿವಲ್ ಉದ್ಘಾಟನಾ ಸಮಾರಂಭವು ಉಡುಪಿ ಶಾಖೆಯಲ್ಲಿ ಶನಿವಾರ ನಡೆಯಿತು.
ಆನ್‌ಕಟ್ ಅಭರಣವನ್ನು ಸಮೃದ್ಧಿ ಶೆಟ್ಟಿ, ಪ್ರೇಶಿಯ ಆಭರಣವನ್ನು ಅಂಜಲಿ ಶಾನ್‌ಬೋಗ್, ಜೆಮ್ಸ್ಸೆಟ್ ಆಭರಣವನ್ನು ನಿಶಾ ಸಾಜಿದ್ ಅನಾ ವರಣಗೊಳಿಸಿದರು.
ವಿಶ್ವದ ಅತಿದೊಡ್ಡ ಆಭರಣಗಳ ರೀಟೇಲರ್‌ಗಳಲ್ಲಿ ಒಂದಾಗಿರುವ ಮಲ ಬಾರ್ ಗೋಲ್ಡ್ ಡೈಮಂಡ್ಸ್ ದೇಶಾದ್ಯಂತ ಇರುವ ತನ್ನೆಲ್ಲಾ ಶೋರೂಂಗಳಲ್ಲಿ ಜೆಮ್‌ಸ್ಟೋನ್ ಜ್ಯುವೆಲ್ಲರಿ ಉತ್ಸವವನ್ನು ಆರಂಭಿಸಿದೆ. ಬೆಲೆಬಾಳುವ ಜೆಮ್ ಸ್ಟೋನ್ಗಳು ಮತ್ತು ಅನ್ಕಟ್ ವಜ್ರಗಳೊಂದಿಗೆ ಅತ್ಯಾಕರ್ಷಕ ಮತ್ತು ಸುಂದರ ವಾದ ಆಭರಣಗಳು ಗ್ರಾಹಕರ ಮನಸೆಳೆಯುತ್ತಿದೆ.
ಈ ಜೆಮ್‌ಸ್ಟೋನ್ ಆಭರಣ ಉತ್ಸವವು ಫೆ.18ರವರೆಗೆ ನಡೆಯಲಿದ್ದು, ನಮ್ಮ ಸಬ್ ಬ್ರಾಂಡ್ ಸಂಗ್ರಹಗಳನ್ನು ಪ್ರದರ್ಶಿಸಿ ಪ್ರೀಶಿಯಾ, ಜೆಮ್ ಆಭರಣ ಮತ್ತು ಅನ್‌ಕಟ್ ವಜ್ರಾಭರಣಗಳನ್ನು ಉತ್ತಮ ಚಿನ್ನದಲ್ಲಿ ಹೆಣೆದ ಮತ್ತು ಅಮೂಲ್ಯವಾದ ಸ್ಟೋನ್‌ಗಳಿಂದ ಕೂಡಿದೆ. ಎಮರಾಲ್, ರೂಬಿ, ಸಫೈರ್ ಮತ್ತು ಅತ್ಯಾಕರ್ಷಕವಾದ ಅನ್‌ಕಟ್ ಡೈಮಂಡ್‌ಗಳಂತಹ ಅತ್ಯಮೂಲ್ಯವಾದ ಸ್ಟೋನ್ಗಳಿಂದ ಅತ್ಯುತ್ಕೃಷ್ಟವಾದ ಚಿನ್ನದಿಂದ ತಯಾರಿಸಲಾದ ಆಭರಣಗಳು ಇಲ್ಲಿವೆ.
ಆಭರಣಗಳ ವಿನ್ಯಾಸದ ತಂಡವು ರಚಿಸಿರುವ ಆಕರ್ಷಕ ವಿನ್ಯಾಸಗಳೊಂದಿಗೆ ಉತ್ಸವವು ಅದ್ಭುತವಾದ ರತ್ನದ ಆಭರಣಗಳನ್ನು ಸಂತೋಷಕರ ಮಾಲೀಕತ್ವದ ಭರವಸೆಯೊಂದಿಗೆ ಹೊಂದಲು ಅತ್ಯುತ್ತಮ ಅವಕಾಶವನ್ನು ನೀಡುತ್ತದೆ. ಇದರ ಜೊತೆಗೆ ಜೀವನಪರಿರ್ಯಂತ ಉಚಿತ ನಿರ್ವಹಣೆ, ಒಂದು ವರ್ಷದ ವಿಮೆ, ಬೈಬ್ಯಾಕ್ ಗ್ಯಾರಂಟಿ ಹಾಗೂ ವಿವರಗಳೊಂದಿಗೆ ಪಾರದರ್ಶಕ ಬೆಲೆಯನ್ನು ನೀಡುತ್ತದೆ.
ಈ ಸಂದರ್ಭದಲ್ಲಿ ಜಿ.ಆರ್.ಎಂ. ರಾಘವೇಂದ್ರ ನಾಯಕ್, ಪುರಂದರ ತಿಂಗಳಾಯ, ಮುಸ್ತಫಾ ಉಪಸ್ಥಿತರಿದ್ದರು. ಕವಿತಾ ಸ್ವಾಗತಿಸಿ, ವಂದಿಸಿದರು.





