Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರೈತರೇ ನಡೆಸಿಕೊಡುವ ವಿಲೇಜ್ ಕುಕ್ಕಿಂಗ್...

ರೈತರೇ ನಡೆಸಿಕೊಡುವ ವಿಲೇಜ್ ಕುಕ್ಕಿಂಗ್ ಚಾನೆಲ್ ನಲ್ಲಿ 'ಅಡುಗೆ ಮಾಡಿʼ ಮಿಂಚಿದ ರಾಹುಲ್ ಗಾಂಧಿ

ವೀಡಿಯೋ ವೀಕ್ಷಿಸಿ

ವಾರ್ತಾಭಾರತಿವಾರ್ತಾಭಾರತಿ30 Jan 2021 10:44 PM IST
share
ರೈತರೇ ನಡೆಸಿಕೊಡುವ ವಿಲೇಜ್ ಕುಕ್ಕಿಂಗ್ ಚಾನೆಲ್ ನಲ್ಲಿ ಅಡುಗೆ ಮಾಡಿʼ ಮಿಂಚಿದ ರಾಹುಲ್ ಗಾಂಧಿ

ತಿರುಚಿ,ಜ.30: ಪುಡುಕೊಟೈ ಜಿಲ್ಲೆಯ ಚಿನ್ನ ವೀರಮಂಗಲಂನ ರೈತರ ಗುಂಪೊಂದು ನಡೆಸುವ ವಿಲೇಜ್ ಕುಕ್ಕಿಂಗ್ ಚಾನೆಲ್(ವಿಸಿಸಿ)ಚೆಫ್ ಗಳು ಯೂ ಟ್ಯೂಬ್ ನಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗೆ ಕರೂರ್ ಜಿಲ್ಲೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ತಮ್ಮ ಅಡುಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ವಿಸಿಸಿ ಬಳಗ ಎಲ್ಲರನ್ನು ಅಚ್ಚರಿಗೊಳಿಸಿತ್ತು. ರೈತರೊಂದಿಗೆ ರಾಹುಲ್ ಅಡುಗೆ ಮಾಡುವ ಈ ವೀಡಿಯೊ ಭಾರೀ ವೈರಲ್ ಆಗಿದ್ದು 54 ಲಕ್ಷಕ್ಕೂ ಅಧಿಕ ಜನರು ವೀಡಿಯೊ ವೀಕ್ಷಿಸಿದ್ದಾರೆ.

"ನಮ್ಮನ್ನು ಭೇಟಿಯಾಗಲು ರಾಹುಲ್ ಗಾಂಧಿ ಬಯಸಿದ್ದರು ಎಂಬ ವಿಚಾರ ತಿಳಿದು ನಮಗೆ ರೋಮಾಂಚನವಾಗಿತ್ತು. ಅವರು ನಮ್ಮ ಕೆಲವು ವೀಡಿಯೋಗಳನ್ನು ನೋಡಿದ್ದಾರೆ" ಎಂದು ತನ್ನ ಸಹೋದರ ಸಂಬಂಧಿಗಳಾದ ಮುರುಗೇಸನ್, ಅಯ್ಯನಾರ್, ತಮಿಳ್ ಸೆಲ್ವನ್ ಹಾಗೂ ಟಿ. ಮುತ್ತುಮಣಿಕ್ಕಂ ಜೊತೆಗೆ ವಿಸಿಸಿ ಯನ್ನು ನಡೆಸುತ್ತಿರುವ ವಿ.ಸುಬ್ರಮಣಿಯನ್ ಹೇಳಿದ್ದಾರೆ.

ರಾಹುಲ್ ಅಣ್ಣ ಅಣಬೆ ಬಿರಿಯಾನಿ ತಯಾರಿಕೆಯ ಆರಂಭದಲ್ಲೇ ನಮ್ಮೊಂದಿಗೆ ಇರಬೇಕಾಗಿತ್ತು.ಆದರೆ ಅವರು ಕೆಲಸದ ಒತ್ತಡದಿಂದ ಬೇಗನೆ ಬರಲಿಲ್ಲ. ಆದರೆ ರಾಯ್ತಾ ತಯಾರಿಸಲು ನಮ್ಮೊಂದಿಗೆ ಕೈಜೋಡಿಸಿದರು. ನಮ್ಮೊಂದಿಗೆ ರಾಹುಲ್ ಅಣ್ಣ ಬೇಗನೆ ಬೆರತುಕೊಂಡಿದ್ದನ್ನು ನೋಡಿ ಹೃದಯ ಉಕ್ಕಿಬಂತು ಎಂದು ಸುಬ್ರಹ್ಮಣ್ಯನ್ “ದಿ ಹಿಂದೂ’ಗೆ ತಿಳಿಸಿದರು.

ಶುಕ್ರವಾರ ಯೂಟ್ಯೂಬ್ ನಲ್ಲಿ ಹಂಚಿಕೆಯಾಗಿರುವ 14 ನಿಮಿಷದ ವೀಡಿಯೊದಲ್ಲಿ ರಾಹುಲ್ ಗಾಂಧಿ ರಾಯ್ತಾ ತಯಾರಿಸಿದರು. ಇದನ್ನು ತಯಾರಿಸಲು ಏನೇನು ಪದಾರ್ಥಗಳು ಬೇಕೆನ್ನುವ ಕುರಿತು ಗಾಂಧಿ ತಮಿಳಿನಲ್ಲೇ ಹೇಳಿದರು.
 
ವೆಂಗಾಯಂ(ಈರುಳ್ಳಿ), ತೈರ್ (ಮೊಸರು) ಹಾಗೂ ಕಲ್ಲು ಉಪ್ಪು ಎಂದು ತಮಿಳಿನಲ್ಲೇ ಹೇಳುತ್ತಾ ರಾಹುಲ್ ಅವುಗಳನ್ನು ಒಂದು ಪಾತ್ರೆಗೆ ಹಾಕುತ್ತಾರೆ. ನಾನು ಅಡುಗೆ ಮಾಡಲು ತುಂಬಾ ಇಷ್ಟಪಡುತ್ತೇನೆ ಎಂದು ರಾಹುಲ್ ಚೆಫ್ ಗಳಿಗೆ ಹೇಳುತ್ತಾರೆ. ಕರೂರಿನ ಕಾಂಗ್ರೆಸ್ ಸಂಸದೆ ಎಸ್. ಜ್ಯೋತಿಮಣಿ ಅವರು ತಮಿಳು ಭಾಷೆಯನ್ನು ಅನುವಾದಿಸಿ ರಾಹುಲ್ ಗೆ ತಿಳಿಸಿದರು.

“ವಿಲೇಜ್ ಕುಕ್ಕಿಂಗ್ ಚಾನೆಲ್ ನ ಹಿಂದಿರುವ ಜನರ ಕಥೆ ಕೇಳಿ ನಾನು ಸ್ಫೂರ್ತಿ ಪಡೆದಿದ್ದೆ. ಆನ್ ಲೈನ್ ಉದ್ಯಮದಿಂದ ಬರುವ ಆದಾಯದಿಂದ ಇತರರಿಗೆ ಹೇಗೆ ಸಹಾಯ ಮಾಡುತ್ತಾರೆ ಎಂಬುದನ್ನು ನೋಡಿ ನನಗೆ ಸಂತೋಷವಾಯಿತು.  ರಾಹುಲ್ ಗಾಂಧಿ ಈಗಾಗಲೇ ತಮ್ಮ ಕೆಲಸ ಮೂಲಕ ಯೂಟ್ಯೂಬ್ ನಲ್ಲಿ ಪರಿಚಿತರಾಗಿದ್ದಾರೆ. ಹೀಗಾಗಿ ನಮಗೆ ಭೇಟಿಯಾಗಲು ಇದೊಂದು ಉತ್ತಮ ಮಾರ್ಗವಾಗಿದೆ ಎಂದು ಜ್ಯೋತಿಮಣಿ ಹೇಳಿದರು.

ರಾಹುಲ್ ಗಾಂಧಿ ಸುಮಾರು ಒಂದೂವರೆ ಗಂಟೆ ಕಾಲ ವಿಸಿಸಿ ತಂಡದೊಂದಿಗೆ ಇದ್ದರು. ತೆಂಗಿನಗರಿಯಿಂದ ತಯಾರಿಸಿರುವ ಚಾಪೆಗಳ ಮೇಲೆ ಕುಳಿತ ರಾಹುಲ್ ಗಾಂಧಿ, ರಾಯ್ತಾದೊಂದಿಗೆ ಅಣಬೆ ಬಿರಿಯಾನಿಯ ರುಚಿ ನೋಡಿದರು. ಅಮೆರಿಕದಲ್ಲಿ ವಿಸಿಸಿ ತಂಡ ತಮ್ಮ ಪ್ರದರ್ಶನ ನೀಡಲು ನೆರವಾಗಲು ಚಿಕಾಗೊ ಮೂಲದ ಸ್ಯಾಮ್ ಪಿಟ್ರೋಡಾ(ಮಾಜಿ ಪ್ರಧಾನಿ ರಾಜೀವ್ ಗಾಂದಿ ಹಾಗೂ ಮನಮೋಹನ್ ಸಿಂಗ್ ಅವರ ಸಲಹೆಗಾರರು)ಅವರೊಂದಿಗೆ  ಮಾತನಾಡುವುದಾಗಿ ಹೇಳಿದರು. ಈ ಗ್ರೂಪ್ ಇನ್ನಷ್ಟು ದೇಶಗಳಿಗೆ ಪ್ರಯಾಣಿಸಬೇಕೆಂದು ಸಲಹೆ ನೀಡಿದರು.

ಅಣಬೆ ಬಿರಿಯಾನಿ ಸವಿದ ಬಳಿಕ ರಾಹುಲ್ ಗಾಂಧಿ ಅವರು ರೊಂಬಾ ನಲ್ಲಾ ಇರುಕ್ಕು(ಇದು ತುಂಬಾ ಚೆನ್ನಾಗಿದೆ)ಎಂದು ಬರೆದು ತಮ್ಮ ಸಹಿ ಹಾಕಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X