ಫೆ.28ರೊಳಗೆ ವಿದ್ಯಾರ್ಥಿ ಬಸ್‍ಪಾಸ್ ಪಡೆಯಲು ಸೂಚನೆ
ಬೆಂಗಳೂರು, ಜ.30: ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 2020-21ನೇ ಸಾಲಿನ ವಿದ್ಯಾರ್ಥಿ ಪಾಸಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಫೆ.28ರೊಳಗಾಗಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಾಸ್‍ಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ.
ವಿದ್ಯಾರ್ಥಿ ಪಾಸಿಗಾಗಿ ನೋಂದಣಿಯಾಗದ ಶಿಕ್ಷಣ ಸಂಸ್ಥೆಗಳು ಸಾರಿಗೆ ಸಂಸ್ಥೆಯ ವೆಬ್‍ಸೈಟ್ www.mybmtc.karnataka.nic.in ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ ವಿದ್ಯಾರ್ಥಿ ಪಾಸಿಗಾಗಿ, ಅರ್ಜಿ ಸಲ್ಲಿಸಿ ಪಾಸು ಪಡೆಯದೇ ಇರುವ ವಿದ್ಯಾರ್ಥಿಗಳು ಪಾಸು ಪಡೆಯುವ ಸ್ಥಳ(ಬೆಂಗಳೂರು ಒನ್ ಕೇಂದ್ರ), ದಿನಾಂಕ ಮತ್ತು ವೇಳೆಯನ್ನು ನಿಗದಿಪಡಿಸಿಕೊಂಡು ಪಾಸು ಪಡೆದುಕೊಳ್ಳಬೇಕೆಂದು ಸಾರಿಗೆ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





