ಜೈಲಿನಲ್ಲಿರುವ ನಮ್ಮವರ ಬಿಡುಗಡೆ ಬಳಿಕ ಸರಕಾರದೊಂದಿಗೆ ಮಾತುಕತೆ: ರಾಕೇಶ್ ಟಿಕಾಯತ್

ಹೊಸದಿಲ್ಲಿ: ಒತ್ತಡದಲ್ಲಿ ಯಾವುದೇ ತೀರ್ಮಾನಕ್ಕೆ ಬರುವುದಿಲ್ಲ. ಜೈಲಿನಲ್ಲಿರುವ ನಮ್ಮವರನ್ನು ಬಿಡುಗಡೆ ಮಾಡಿದರೆ ಮಾತ್ರ ಕೃಷಿ ಕಾನೂನುಗಳ ಕುರಿತು ನಾವು ಚರ್ಚೆ ನಡೆಸುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ರವಿವಾರ ಹೇಳಿದ್ದಾರೆ.
ಒತ್ತಡದಲ್ಲಿ ಯಾವುದೇ ಒಪ್ಪಂದಕ್ಕೆ ಬರುವುದಿಲ್ಲ. ಈ ವಿಚಾರದ ಕುರಿತು ನಾವು ಚರ್ಚೆ ನಡೆಸುತ್ತೇವೆ. ಪ್ರಧಾನಮಂತ್ರಿ ನಮ್ಮವರೇ. ಅವರ ಸಲಹೆಗೆ ನಾವು ಧನ್ಯವಾದ ಹೇಳುತ್ತೇವೆ. ನಾವು ಅದನ್ನು ಗೌರವಿಸುತ್ತೇವೆ. ನಮ್ಮ ಜನರು ಜೈಲಿನಿಂದ ಬಿಡುಗಡೆಯಾಗುವುದನ್ನು ಬಯಸುತ್ತೇವೆ ಎಂದು ಎಎನ್ ಐಗೆ ಟಿಕಾಯತ್ ತಿಳಿಸಿದರು.
Next Story





