ಸಿಎಂ, ಸಚಿವ ನಿರಾಣಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ: ಉದ್ಯಮಿ ಆಲಂ ಪಾಷಾ ಆರೋಪ

ಬೆಂಗಳೂರು. ಜ, 31: ಸಿಎಂ ಯಡಿಯೂರಪ್ಪ, ಸಚಿವ ಮುರುಗೇಶ್ ನಿರಾಣಿ ನನ್ನನ್ನು ಟಾರ್ಗೆಟ್ ಮಾಡಿ ಸುಳ್ಳು ದೂರು ದಾಖಲಿಸಿ ನಮ್ಮ ಮನೆ ಮೇಲೆ ಪೊಲೀಸ್ ದಾಳಿ ಮಾಡಿಸಿದ್ದಾರೆ ಎಂದು ಉದ್ಯಮಿ ಆಲಂ ಪಾಷಾ ಆರೋಪಿಸಿದ್ದಾರೆ.
ಅಧಿಕಾರ ದುರ್ಬಳಕೆ ಮಾಡಿಕೊಂಡು ಇವರು ನನ್ನನ್ನು ಯಾವುದೇ ಕ್ಷಣದಲ್ಲಿ ಬೇಕಾದರೂ ಬಂಧಿಸಬಹುದು. ತಮಗೆ ಕಿರುಕುಳ ನೀಡುತ್ತಿರುವ ಸಚಿವ ಮುರುಗೇಶ್ ನಿರಾಣಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಧಾನ ಮಂತ್ರಿಗಳಿಗೆ ಹಾಗೂ ಬಿಜಪಿ ಪಕ್ಷಕ್ಕೆ ದೂರು ನೀಡಿರುವುದಾಗಿ ಪಾಷಾ ಅವರು ಹೇಳಿದ್ದಾರೆ.
ಇಬ್ಬರು ನಾಯಕರು ಕಳೆದ 10 ವರ್ಷಗಳಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ. 2011ರಲ್ಲಿ ತಮ್ಮ ಸಂಸ್ಥೆ ರೂಪಿಸಿದ್ದ ಯೋಜನೆಗೆ ಮಂಜೂರಾಗಿದ್ದ ಭೂಮಿಯನ್ನು ಮುರುಗೇಶ್ ನಿರಾಣಿ ಕಮಿಷನ್ ನೀಡಲಿಲ್ಲ ಎಂದು ತಡೆಹಿಡಿದು ಕಿರುಕುಳ ನೀಡುತ್ತಿದ್ದಾರೆ.
ಇದೀಗ ಮತ್ತೆ ನನ್ನನ್ನು ಟಾರ್ಗೆಟ್ ಮಾಡಿ ಸುಳ್ಳು ದೂರು ದಾಖಲಿಸಿ ನಮ್ಮ ಮನೆ ಮೇಲೆ ಪೊಲೀಸ್ ದಾಳಿ ಮಾಡಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಇವರು ನನ್ನನ್ನು ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಬಂಧಿಸಬಹುದು. ಇವರ ಕಿರುಕುಳದಿಂದ ಆತ್ಮಹತ್ಯೆ ಕುರಿತು ಯೋಚಿಸಬೇಕಾಗಿದೆ ಎಂದು ಸಿಎಂ, ನಿರಾಣಿ ವಿರುದ್ಧ ಪಾಷಾ ಆರೋಪಿಸಿದ್ದಾರೆ.







