ಜಾನುವಾರು ಕಳವು ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಕುಂದಾಪುರ, ಜ.31: ಕೊರ್ಗಿ ಗ್ರಾಮದ ಕೋಣಟ್ಟು ಎಂಬಲ್ಲಿ ನಡೆದ ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬೈಂದೂರು ಸಮೀಪ ಚೆಕ್ ಪೋಸ್ಟ್ ಬಳಿ ಬಂಧಿಸಿದ್ದಾರೆ.
ಶಂಕರ ಕುಲಾಲ್, ಅಶ್ಪಕ್, ಸಿರಾಜ್, ಸೈನಿ ಬಂಧಿತ ಆರೋಪಿಗಳು. ಇವರು ಶರತ್ ಎಂಬವರ ಮೇಯಲು ಬಿಟ್ಟಿದ್ದ ಮೂರು ಜಾನುವಾರುಗಳನ್ನು ಜ.20 ರಂದು ಕಳವು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





