ಬಂಬ್ರಾಣ: ಸ್ನಾನಕ್ಕಿಳಿದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಮೃತ್ಯು

ಶದಾದ್, ಶಿಯಾಝ್
ಕಾಸರಗೋಡು, ಜ.31: ಹೊಳೆಯಲ್ಲಿ ಸ್ನಾನಕ್ಕಿಳಿದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ಕುಂಬಳೆ ಸಮೀಪದ ಬಂಬ್ರಾಣದಲ್ಲಿ ನಡೆದಿದೆ.
ಮೃತಪಟ್ಟವರನ್ನು ಇಚ್ಲಂಗೋಡಿನ ಶರೀಫ್ ಎಂಬವರ ಪುತ್ರರಾದ ಶದಾದ್ (12) ಮತ್ತು ಶಿಯಾಝ್ (8) ಎಂದು ಗುರುತಿಸಲಾಗಿದೆ.
ಶದಾದ್ ಹಾಗೂ ಶಹಾಸ್ ಬಂಬ್ರಾಣ ಆಣೆಕಟ್ಟು ಸಮೀಪದ ಹೊಳೆಯಲ್ಲಿ ಪರಿಸರದ ಮಕ್ಕಳೊಂದಿಗೆ ಸ್ನಾನಕ್ಕಿಳಿದಿದ್ದು, ಈ ಸಂದರ್ಭ ಸಹೋದರರಿಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಜೊತೆಗಿದ್ದ ಮಕ್ಕಳು ಬೊಬ್ಬೆ ಹಾಕಿದ್ದಾರೆನ್ನಲಾಗಿದೆ. ವಿಷಯ ತಿಳಿದು ಸ್ಥಳೀಯರು ಹಾಗೂ ಆಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹೊಳೆಯಲ್ಲಿ ಶೋಧ ಕಾರ್ಯ ನಡೆಸಿದ್ದು, ಶದಾದ್ ಹಾಗೂ ಶಹಾಸ್ನ ಮೃತದೇಹ ಹೊರತೆಗೆಯಲಾಗಿದೆ.
ಈ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





