ಶಕೀರಾ ಇರ್ಫಾನಗೆ ಡಾಕ್ಟರೇಟ್

ಮಂಗಳೂರು, ಫೆ.1: ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಕಾಂಲ್ಲಿ 2 ಚಿನ್ನದ ಪದಕಗಳೊಂದಿಗೆ ಪ್ರಥಮ ರ್‍ಯಾಂಕ್ (2010) ಗಳಿಸಿದ್ದ ಮಡಿಕೇರಿಯ ಶಕೀರಾ ಇರ್ಫಾನಾ ವಾಣಿಜ್ಯ ವಿಭಾಗದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಡಾ.ಪರಮೇಶ್ವರ ಮಾರ್ಗದರ್ಶನದಲ್ಲಿ ಶಕೀರಾ ಇರ್ಫಾನಾ, ‘ಪ್ಲಾಬ್ಲೆಮ್ಸ್ ಆ್ಯಂಡ್ ಪ್ರಾಸ್‌ಪೆಕ್ಟ್ಸ್ ಆಫ್ ಸೆಲ್ಪ್ ಹೆಲ್ಪ್ ಗ್ರೂಪ್ ಬ್ಯಾಂಕ್ ಲಿಂಕೇಜ್ ಪ್ರೋಗ್ರಾಂ ಆ್ಯಂಡ್ ಮೈಕ್ರೋ ಫೈನಾನ್ಸ್ ಟು ರೂರಲ್ ವುಮೆನ್ ಎಂಟರ್‌ಪ್ರೈಸಸ್- ಎ ಸ್ಟಡಿ ಇನ್ ದಕ್ಷಿಣ ಕನ್ನಡ ಆ್ಯಂಡ್ ಉಡುಪಿ ಡಿಸ್ಟ್ರಿಕ್ಟ್’ ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ಶಕೀರಾ ಅವರು ಮಡಿಕೇರಿಯ ಟ್ಯಾಕ್ಸ್ ಪ್ರಾಕ್ಟೀಶನರ್ ಹಾಗೂ ಪ್ಲಾಂಟರ್ ಆಗಿರುವ ಅಬ್ದುರ್ರಹ್ಮಾನ್ ಹಾಗೂ ಸಫಿಯಾ ದಂಪತಿಯ ಪುತ್ರಿ.
Next Story





