ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಪರಿಕಲ್ಪನೆ ಜಾರಿಯಲ್ಲಿದೆ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಪರಿಕಲ್ಪನೆ 32 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಜಾರಿಯಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತನ್ನ ಬಜೆಟ್ ಭಾಷಣದ ವೇಳೆ ಘೋಷಿಸಿದರು.
ಕೇಂದ್ರ ಸರಕಾರವು ವಲಸೆ ಕಾರ್ಮಿಕರ ದತ್ತಾಂಶವನ್ನು ಸಂಗ್ರಹಿಸಲು ಪೋರ್ಟಲ್ ನ್ನು ಆರಂಭಿಸಲಿದೆ. ಈ ಯೋಜನೆಯ ಮೂಲಕ ಫಲಾನುಭವಿಗಳು ಪಡಿತರವನ್ನು ದೇಶದಲ್ಲಿ ಎಲ್ಲಿಯಾದರೂ ಪಡೆಯಬಹುದು. ನಿರ್ದಿಷ್ಟವಾಗಿ ವಲಸೆ ಕಾರ್ಮಿಕರು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ ಎಂದರು.
Next Story





