ಕೋಡಿಕನ್ಯಾನ ಮಸೀದಿ ಅಧ್ಯಕ್ಷರಾಗಿ ಇಸ್ಮಾಯಿಲ್

ಕುಂದಾಪುರ, ಫೆ.1: ಕೋಡಿ ಕನ್ಯಾನ ಮೊಹಿಯುದ್ದಿನ್ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆಯು ರವಿವಾರ ಮಸೀದಿಯಲ್ಲಿ ಕೆ.ಎಚ್. ಮೂಸ ಬ್ಯಾರಿ ಅಧ್ಯಕ್ಷತೆಯಲ್ಲಿ ಜರಗಿತು.
ಮಸೀದಿ ಧರ್ಮಗುರು ಅಶ್ರಫ್ ಉಸ್ತಾದ್ ದುವಾ ನೆರವೇರಿಸಿದರು. ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಪಿ. ನಾಸಿರುದ್ದಿನ್ ಮಂಡಿಸಿದರು. ಇದೇ ವೇಳೆ 2021-22ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಇಸ್ಮಾಯಿಲ್ ಬಿ.ಕೆ., ಉಪಾಧ್ಯಕ್ಷರಾಗಿ ಹಾಜಿ ಇಬ್ರಾಹಿಂ ಪಾರಂಪಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಲತೀಫ್ ಪಾರಂಪಳ್ಳಿ, ಜೊತೆ ಕಾರ್ಯದರ್ಶಿಯಾಗಿ ಕೆ.ಎಚ್.ಹುಸೇನ್ ಪಡುಕೆರೆ, ಕೋಶಾಧಿಕಾರಿಯಾಗಿ ಅಬ್ಬಾಸ್ ಅಲಿ ಕೋಡಿಕನ್ಯಾನ, ಗೌರವಾಧ್ಯಕ್ಷರಾಗಿ ಕೆ.ಎಚ್.ಮೂಸಾ ಬ್ಯಾರಿ, ಲೆಕ್ಕ ಪರಿಶೋಧಕರಾಗಿ ದಾವೂದ್ ಬಿ.ಕೆ., ಸಲಹ ಸಮಿತಿ ಸದಸ್ಯರಾಗಿ ಪಿ. ನಾಸಿರುದ್ದಿನ್ ಕೋಡಿಕನ್ಯಾನ, ಭಾಷ ಪಾರಂಪಳ್ಳಿ, ಕೆ.ಎಚ್. ಇಬ್ರಾಹಿಂ ಪಡುಕೆರೆ, ಅಬ್ದುಲ್ ರಹಿಮಾನ್ ಪಡುಕೆರೆ, ಮುನೀರ್ ಕೋಡಿಕನ್ಯಾನ, ಮೊಹಮ್ಮದ್ ಹಾಜಿ ಪಾರಂಪಳ್ಳಿ, ಸದಸ್ಯರುಗಳಾಗಿ ಇಮ್ರಾನ್ ಪಡುಕೆರೆ, ಇಂತಿಯಾಜ್ ಪಡುಕೆರೆ, ಸೇಫಿಯುಲ್ಲ ಪಾರಂಪಳ್ಳಿ, ಇಬ್ರಾಹಿಂ ಎಚ್.ಎಸ್. ಯಾಸಿನ್, ಆಸೀಫ್, ರಫೀಕ್, ದಿಶಾ, ಶಾದತ್ ಇವರನ್ನು ಆಯ್ಕೆ ಮಾಡ ಲಾಯಿತು.





