ಫೆ. 2ರಂದು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಾಪುವಿನಲ್ಲಿ ಪ್ರತಿಭಟನೆ
ಕಾಪು : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಕಾಂಗ್ರೆಸ್ ಪಕ್ಷವು ಖಂಡಿಸಿ ಬೀಡಿ ಕಾರ್ಮಿಕರ ಹಿತಾಸಕ್ತಿಗಾಗಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವತಿಯಿಂದ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಕಾಪುವಿನಲ್ಲಿ ಫೆ. 2ರಂದು ನಡೆಯಲಿದೆ.
ಪೂರ್ವಾಹ್ನ 11 ಘಂಟೆಗೆ ಕಾಪು ಶ್ರೀ ಜನಾರ್ಧನ ದೇವಸ್ಥಾನದ ವಠಾರದಲ್ಲಿ ಪ್ರತಿಭಟನಾಕಾರರೆಲ್ಲ ಸೇರಿ, ಕಾಪು ಪೇಟೆಗೆ ಕಾಲ್ನಡಿಗೆ ಜಾಥಾ ಮೂಲಕ ತೆರಳಿ ಅಲ್ಲಿ ಪ್ರತಿಭಟನಾ ಸಭೆ ನಡೆಯಲಿಕ್ಕಿದೆ.
ದೇಶದ ಬೆನ್ನೆಲುಬಾದ ರೈತರಿಗೆ , ಕಾರ್ಮಿಕರಿಗೆ ಕಂಟಕಪ್ರಾಯವಾದ ನೂತನ ಕಾಯ್ದೆಗಳನ್ನು ಜಾರಿಗೆ ತಂದು ರೈತರ, ಕಾರ್ಮಿಕರ ಬದುಕನ್ನು ಈಗಾಗಲೇ ದುಸ್ತರಗೊಳಿಸಿರುವ ಸರ್ಕಾರ, ಇದೀಗ ಬಡಪಾಯಿ ಬೀಡಿ ಕಾರ್ಮಿಕರ ಜೀವನಕ್ಕೆ ಮಾರಕ ವಾಗಲಿರುವ ಕಾಯ್ದೆಯನ್ನು ತರುವ ಮೂಲಕ ಬೀಡಿ ಕಾರ್ಮಿಕರ ಬದುಕಿಗೆ ಕೊಡಲಿಯೇಟು ನೀಡಲು ಹೊರಟಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





