Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ...

ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮವನ್ನು ಬೀರಲಿರುವ ಮುಂಗಡ ಪತ್ರದಲ್ಲಿನ ಪ್ರಸ್ತಾವಗಳು

ವಾರ್ತಾಭಾರತಿವಾರ್ತಾಭಾರತಿ1 Feb 2021 8:32 PM IST
share
ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮವನ್ನು ಬೀರಲಿರುವ ಮುಂಗಡ ಪತ್ರದಲ್ಲಿನ ಪ್ರಸ್ತಾವಗಳು

 ಹೊಸದಿಲ್ಲಿ,ಫೆ.1: ಸೋಮವಾರ ಸಂಸತ್ತಿನಲ್ಲಿ 2021ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಸ್ಲಾಬ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲವಾದರೂ 75 ವರ್ಷಕ್ಕೂ ಹೆಚ್ಚಿನ ಪ್ರಾಯದ ಹಿರಿಯ ನಾಗರಿಕರಿಗೆ ಮತ್ತು ತೆರಿಗೆ ಸಲ್ಲಿಕೆಯನ್ನು ಸುಲಭವಾಗಿಸಲು ಅನಿವಾಸಿ ಭಾರತೀಯ (ಎನ್ನಾರೈ)ರಿಗೆ ವಿನಾಯಿತಿಗಳನ್ನು ಘೋಷಿಸಿದ್ದಾರೆ. ನಿಮ್ಮ ಹಣಕಾಸುಗಳ ಮೇಲೆ ಪರಿಣಾಮವನ್ನು ಬೀರಲಿರುವ ಮುಂಗಡಪತ್ರದಲ್ಲಿನ 10 ಪ್ರಸ್ತಾವಗಳು ಇಲ್ಲಿವೆ:

ಹಿರಿಯ ನಾಗರಿಕರು ಐಟಿಆರ್ ಸಲ್ಲಿಸಬೇಕಿಲ್ಲ

ಕೇವಲ ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ಹೊಂದಿರುವ 75 ವರ್ಷಕ್ಕೂ ಹೆಚ್ಚಿನ ಪ್ರಾಯದ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವುದಕ್ಕೆ ವಿನಾಯಿತಿಯನ್ನು ನೀಡುವ ಮೂಲಕ ಸೀತಾರಾಮನ್ ಅವರಿಗೆ ನೆಮ್ಮದಿಯನ್ನು ಒದಗಿಸಿದ್ದಾರೆ. ಆದರೆ ಹಲವು ಹಿರಿಯ ನಾಗರಿಕರು ಈಕ್ವಿಟಿ ಶೇರುಗಳಲ್ಲಿ ಹೂಡಿಕೆಯನ್ನು ಹೊಂದಿರುವುದರಿಂದ ಡಿವಿಡೆಂಡ್ ಆದಾಯವೂ ಈ ವಿನಾಯಿತಿಗೆ ಅರ್ಹವೇ ಎನ್ನುವುದನ್ನು ಅವರು ನಿರ್ದಿಷ್ಟವಾಗಿ ತಿಳಿಸಿಲ್ಲ.

ಮೊದಲೇ ಭರ್ತಿ ಮಾಡಲಾದ ತೆರಿಗೆ ನಮೂನೆಗಳು

ಆದಾಯ ತೆರಿಗೆಯನ್ನು ಸಲ್ಲಿಸುವುದನ್ನು ಸುಲಭವಾಗಿಸಲು ಮೂಲದಲ್ಲಿ ತೆರಿಗೆ ಕಡಿತದ ಜೊತೆಗೆ ಬಂಡವಾಳ ಗಳಿಕೆ ಹಾಗೂ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಿಂದ ಬಡ್ಡಿಗಳ ವಿವರಗಳನ್ನು ತೆರಿಗೆ ನಮೂನೆಗಳಲ್ಲಿ ಮೊದಲೇ ಭರ್ತಿ ಮಾಡಲಾಗುತ್ತದೆ ಎಂದು ಸೀತಾರಾಮನ್ ತಿಳಿಸಿದರು. ಮೊದಲೇ ಭರ್ತಿ ಮಾಡಲಾದ ನಮೂನೆಗಳು ತೆರಿಗೆ ಪಾಲನೆಯನ್ನು ಹೆಚ್ಚಿಸಲಿವೆ ಮತ್ತು ದತ್ತಾಂಶಗಳು ಈಗಾಗಲೇ ಸಂಗ್ರಹಗೊಂಡಿರುವುದರಿಂದ ತಮ್ಮ ತೆರಿಗೆಗಳನ್ನು ತ್ವರಿತವಾಗಿ ಸಲ್ಲಿಸಲು ತೆರಿಗೆದಾರರಿಗೆ ನೆರವಾಗಲಿವೆ.

ಸಂಪರ್ಕರಹಿತ ತೆರಿಗೆ ವೌಲ್ಯಮಾಪನ

  ತೆರಿಗೆ ಮೌಲ್ಯಮಾಪನಕ್ಕೆ ತೆರಿಗೆದಾರರು ಅಧಿಕಾರಿಗಳ ಎದುರು ಖುದ್ದಾಗಿ ಹಾಜರಾಗುವ ಹಳೆಯ ಪದ್ಧತಿಯನ್ನು ಬದಲಿಸಿರುವ ‘ಫೇಸ್‌ಲೆಸ್ ಅಸೆಸ್‌ಮೆಂಟ್ ಅಥವಾ ಸಂಪರ್ಕರಹಿತ ತೆರಿಗೆ ಮೌಲ್ಯಮಾಪನ (ಡಿಜಿಟಲ್ ವಿಧಾನದಲ್ಲಿ ತೆರಿಗೆ ಮೌಲ್ಯಮಾಪನ)’ಕ್ಕೆ ಈ ವರ್ಷದ ಮುಂಗಡಪತ್ರವು ಹೆಚ್ಚಿನ ಒತ್ತು ನೀಡಿದೆ ಮತ್ತು ಅದನ್ನು ಇನ್ನಷ್ಟು ಸದೃಢಗೊಳಿಸಲು ಉದ್ದೇಶಿಸಿದೆ. ಆನ್‌ಲೈನ್‌ನಲ್ಲಿ ವಿವಾದ ಪರಿಹಾರ ಸಮಿತಿಯೊಂದನ್ನು ಸ್ಥಾಪಿಸಲಾಗುವುದು ಮತ್ತು 50 ಲ.ರೂ.ವರೆಗಿನ ತೆರಿಗೆಗೆ ಅರ್ಹ ಆದಾಯ ಮತ್ತು 10 ಲ.ರೂ.ವರೆಗಿನ ವಿವಾದಿತ ಆದಾಯವನ್ನು ಹೊಂದಿರುವ ಯಾರೇ ಆದರೂ ಈ ಸಮಿತಿಯನ್ನು ಸಂಪರ್ಕಿಸಬಹುದು.

ಎನ್ನಾರೈಗಳಿಗೆ ವಿನಾಯಿತಿ

ಎನ್ನಾರೈಗಳಿಗೆ,ವಿಶೇಷವಾಗಿ ಭಾರತಕ್ಕೆ ಮರಳುವವರಿಗೆ ಇಮ್ಮಡಿ ತೆರಿಗೆ ವಿಧಿಸುವಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಸೀತಾರಾಮನ್ ತನ್ನ ಮುಂಗಡಪತ್ರದಲ್ಲಿ ಪ್ರಸ್ತಾವಿಸಿದ್ದಾರೆ. ಭಾರತದಲ್ಲಿ ಪಾವತಿಸಿದ ತೆರಿಗೆಗೆ ಕ್ರೆಡಿಟ್ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ಪರಿಹಾರ ಒದಗಿಸಲೂ ಗಮನವನ್ನು ಹರಿಸಲಾಗುವುದು ಎಂದಿದ್ದಾರೆ.

ಠೇವಣಿ ವಿಮೆ ರಕ್ಷಣೆಯಲ್ಲಿ ಸುಧಾರಣೆ

ತಾವು ಠೇವಣಿಯಿರಿಸಿರುವ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿದಾಗ ಗ್ರಾಹಕರು ಠೇವಣಿ ವಿಮೆಯನ್ನು ಪಡೆಯುವಂತಾಗಲು ಸರಕಾರ ಮತ್ತು ಆರ್‌ಬಿಐ ಇನ್ನಷ್ಟು ಉತ್ತಮ ನೀತಿಯನ್ನು ರೂಪಿಸಲಿವೆ. ಕಳೆದ ವರ್ಷದ ಮುಂಗಡಪತ್ರದಲ್ಲಿ ಬ್ಯಾಂಕ್ ಠೇವಣಿಗಳ ಮೇಲಿನ ವಿಮೆಯ ಮಿತಿಯನ್ನು ಒಂದು ಲ.ರೂ.ಗಳಿಂದ ಐದು ಲ.ರೂ.ಗಳಿಗೆ ಹೆಚ್ಚಿಸಲಾಗಿತ್ತು. ಆದರೆ ಈವರೆಗೆ ಬ್ಯಾಂಕುಗಳು ದಿವಾಳಿಯಾದಾಗ ಮಾತ್ರ ಈ ಸೌಲಭ್ಯವು ಗ್ರಾಹಕರಿಗೆ ದೊರೆಯುತ್ತಿತ್ತು. ಪರಿಷ್ಕೃತ ನೀತಿಯು ಬ್ಯಾಂಕು ದಿವಾಳಿಯಾಗುವ ಮೊದಲೇ ಠೇವಣಿ ವಿಮೆಯನ್ನು ಪಡೆದುಕೊಳ್ಳುವುದನ್ನು ಗ್ರಾಹಕರಿಗೆ ಸಾಧ್ಯವಾಗಿಸಲಿದೆ.

ಗೃಹಸಾಲಗಳ ಮೇಲಿನ ಬಡ್ಡಿಯಲ್ಲಿ ಕಡಿತ ವಿಸ್ತರಣೆ

 ಗೃಹಸಾಲಗಳ ಮೇಲಿನ ಬಡ್ಡಿ ಕಡಿತವನ್ನು 2022,ಮಾ.31ರವರೆಗೆ ಗೃಹಸಾಲಗಳನ್ನು ಪಡೆದುಕೊಳ್ಳುವವರಿಗೂ ವಿಸ್ತರಿಸಲಾಗಿದ್ದು,ಇದು ಅಗ್ಗದ ದರದಲ್ಲಿ ಸ್ವಂತ ಮನೆಯ ಕನಸು ನನಸು ಮಾಡಿಕೊಳ್ಳುವುದಕ್ಕೆ ಉತ್ತೇಜನ ನೀಡಲಿದೆ.

ಮೂಲಸೌಕರ್ಯಕ್ಕಾಗಿ ತೆರಿಗೆ ವಿನಾಯಿತಿಯ ಝೀರೊ ಕೂಪನ್ ಬಾಂಡ್‌ಗಳು

 ಚಿಲ್ಲರೆ ಹೂಡಿಕೆದಾರರಿಗೆ ಶೀಘ್ರವೇ ಹೊಸ ಹೂಡಿಕೆ ಸಾಧನವೊಂದು ದೊರೆಯಲಿದೆ. ಮೂಲಸೌಕರ್ಯ ಬೆಳವಣಿಗೆಯನ್ನು ಉತ್ತೇಜಿಸಲು ಮೂಲಸೌಕರ್ಯ ಸಾಲ ನಿಧಿಯೊಂದನ್ನು ಮುಂಗಡಪತ್ರವು ಪ್ರಸ್ತಾವಿಸಿದ್ದು,ತೆರಿಗೆ ವಿನಾಯಿತಿ ಅಥವಾ ರಿಯಾಯಿತಿ ಇರುವ ಝೀರೊ ಕೂಪನ್ ಬಾಂಡ್‌ಗಳನ್ನು ವಿತರಿಸುವ ಮೂಲಕ ನಿಧಿಯನ್ನು ಸಂಗ್ರಹಿಸಲು ಸಾಧ್ಯವಾಗಲಿದೆ. ಈ ಬಾಂಡ್‌ಗಳು ನೀಡುವ ಆದಾಯ ತೆರಿಗೆ ವಿನಾಯಿತಿಗಳ ಬಗ್ಗೆ ವಿವರಗಳು ಇನ್ನಷ್ಟೇ ಪ್ರಕಟಗೊಳ್ಳಬೇಕಿವೆ.

 ತೆರಿಗೆ ವಿವಾದಗಳ ಶೀಘ್ರ ಇತ್ಯರ್ಥ

 ಆದಾಯ ತೆರಿಗೆ ಮೌಲ್ಯಮಾಪನವನ್ನು ಪುನರಾರಂಭಿಸಲು ಕಾಲಮಿತಿಯನ್ನು ಆರು ವರ್ಷಗಳಿಂದ ಮೂರು ವರ್ಷಗಳಿಗೆ ಇಳಿಸಲಾಗಿದೆ . ಗಂಭೀರ ತೆರಿಗೆ ವಂಚನೆ ಪ್ರಕರಣಗಳಲ್ಲಿ ವರ್ಷವೊಂದರಲ್ಲಿ 50 ಲ.ರೂ.ಅಥವಾ ಹೆಚ್ಚಿನ ಆದಾಯವನ್ನು ಬಚ್ಚಿಟ್ಟಿದ್ದಕ್ಕೆ ಸಾಕ್ಷ್ಯಾಧಾರಗಳು ಕಂಡುಬಂದರೆ ಮಾತ್ರ 10 ವರ್ಷಗಳ ಅವಧಿಗೆ ಮಾತ್ರ ಮರು ತೆರಿಗೆ ಮೌಲ್ಯಮಾಪನವನ್ನು ನಡೆಸಲಾಗುವುದು. ಇತರರಿಗೆ ಮರು ತೆರಿಗೆ ಮೌಲ್ಯಮಾಪನದ ಅವಧಿ ಕೇವಲ ಮೂರು ವರ್ಷಗಳಾಗಿರುತ್ತವೆ. ಇದು ತೆರಿಗೆ ಅಧಿಕಾರಿಗಳು ಮತ್ತು ತೆರಿಗೆದಾರರ ಹೊರೆಯನ್ನು ಕಡಿಮೆ ಮಾಡಲಿದೆ ಮತ್ತು ತೆರಿಗೆ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ನೆರವಾಗಲಿದೆ ಎಂದು ಸೀತಾರಾಮನ್ ತಿಳಿಸಿದರು.

ಇನ್ನಷ್ಟು ಹೆಚ್ಚಿನ ನೌಕರರಿಗೆ ಸಾಮಾಜಿಕ ಭದ್ರತೆ ಸೌಲಭ್ಯ ವಿಸ್ತರಣೆ

ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ತಮ್ಮ ಉದ್ಯೋಗಗಳನ್ನು ಕಳೆದುಕೊಂಡು ಅನಿವಾರ್ಯವಾಗಿ ಸ್ವಂತ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ತೆರಿಗೆದಾತರಿಗೆ 2021ನೇ ಸಾಲಿನ ಮುಂಗಡಪತ್ರವು ಕೊಂಚ ನೆಮ್ಮದಿಯನ್ನು ಒದಗಿಸಲಿದೆ. ತಾತ್ಕಾಲಿಕ ಸ್ವತಂತ್ರ ಉದ್ಯೋಗಗಳಲ್ಲಿ ತೊಡಗಿಕೊಂಡವರು ಮತ್ತು ಉಬರ್‌ನಂತಹ ಆ್ಯಪ್ ಆಧಾರಿತ ಸಂಸ್ಥೆಗಳಡಿ ಕೆಲಸ ಮಾಡುವ ಚಾಲಕರಂತಹ ಸಿಬ್ಬಂದಿಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ವಿಸ್ತರಿಸಲಾಗುವುದು. ಇ-ಕಾಮರ್ಸ್ ವೇದಿಕೆಗಳ ನೌಕರರು ಇಎಸ್‌ಐಸಿ,ಇಪಿಎಫ್‌ಒ ಮತ್ತು ಕನಿಷ್ಠ ವೇತನ ನಿಯಮದ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಮಹಿಳೆಯರು ರಾತ್ರಿ ಪಾಳಿಗಳಲ್ಲಿಯೂ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶವನ್ನು ಪಡೆಯಲಿದ್ದಾರೆ.

 ಹಣಕಾಸು ಉತ್ಪನ್ನಗಳಿಗೆ ಹೂಡಿಕೆ ಸನ್ನದು

ತಪ್ಪು ಮಾಹಿತಿಗಳನ್ನು ನೀಡಿ ಹಣಕಾಸು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಲು ಹೂಡಿಕೆ ಸನ್ನದನ್ನು ಅಸ್ತಿತ್ವಕ್ಕೆ ತರುವುದಾಗಿ ಸೀತಾರಾಮನ್ ಪ್ರಕಟಿಸಿದ್ದಾರೆ. ಇದು ಹಣಕಾಸು ಕ್ಷೇತ್ರದಲ್ಲಿಯ ಎಲ್ಲ ಉತ್ಪನ್ನಗಳಲ್ಲಿ ಹೂಡಿಕೆದಾರರಿಗೆ ಸಂಬಂಧಿಸಿರಲಿದೆ. ಈ ಬಗ್ಗೆ ವಿವರಗಳು ಇನ್ನಷ್ಟೇ ಹೊರಬೀಳಬೇಕಿವೆಯಾದರೂ ಸನ್ನದು ಹೂಡಿಕೆದಾರರ ಹಕ್ಕುಗಳನ್ನು ನಿಗದಿಗೊಳಿಸುವ,ಅವರ ದೂರುಗಳನ್ನು ಬಗೆಹರಿಸುವ ವ್ಯವಸ್ಥೆಯನ್ನು ರೂಪಿಸುವ ನಿರೀಕ್ಷೆಯಿದೆ.

ಯಾವುದು ಅಗ್ಗ, ಯಾವುದು ದುಬಾರಿ?

ಇವು ಅಗ್ಗವಾಗಲಿವೆ

ನಾಫ್ತಾ,ನೈಲಾನ್ ತಯಾರಿಕೆಯಲ್ಲಿ ಬಳಕೆಯಾಗುವ ಕ್ಯಾಪ್ರೊಲ್ಯಾಕ್ಟಮ್,ನೈಲಾನ್ ಚಿಪ್‌ಗಳು,ನೈಲಾನ್ ನಾರು ಮತ್ತು ಎಳೆಗಳು, ಸ್ಟೇನ್‌ಲೆಸ್ ಸ್ಟೀಲ್ ಗುಜರಿ ಸೇರಿದಂತೆ ಕರಗಿಸಬಹುದಾದ ಕಬ್ಬಿಣ ಮತ್ತು ಉಕ್ಕು ಗುಜರಿಗಳು, ನಾನ್-ಅಲಾಯ್ (ಮಿಶ್ರಲೋಹವಲ್ಲದ) ಸ್ಟೀಲ್‌ನ ಪ್ರಾಥಮಿಕ/ಅರೆಸಿದ್ಧ ಉತ್ಪನ್ನಗಳು, ನಾನ್ ಅಲಾಯ್ ಮತ್ತು ಅಲಾಯ್ ಸ್ಟೀಲ್‌ನ ಶೀಟ್‌ಗಳು ಹಾಗೂ ಪ್ಲೇಟ್‌ಗಳು, ನಾನ್ ಅಲಾಯ್ ಸ್ಟೀಲ್‌ನ ಬಾರ್,ವೈರ್,ರೋಪ್ ಇತ್ಯಾದಿ ಉತ್ಪನ್ನಗಳು, ಸಿಆರ್‌ಜಿಒ ಸ್ಟೀಲ್ ಉತ್ಪಾದನೆಯಲ್ಲಿ ಬಳಕೆಯಾಗುವ ಕಚ್ಚಾ ವಸ್ತುಗಳು, ತಾಮ್ರದ ಗುಜರಿ,ರಕ್ಷಣಾ ಇಲಾಖೆಯಡಿ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಿಂದ ಇಂಜಿನ್‌ಗಳು ಸೇರಿದಂತೆ ವಿಮಾನ ತಯಾರಿಕೆಗೆ ಅಗತ್ಯ ಬಿಡಿ ಭಾಗಗಳು, ಪ್ಲಾಟಿನಂ ಮತ್ತು ಪಾಲ್ಲಿಡಿಯಂ, ಅಮೂಲ್ಯ ಲೋಹಗಳ ತ್ಯಾಜ್ಯಗಳು ಮತ್ತು ಗುಜರಿಗಳು, ಬಳಸಲಾದ ಕ್ಯಾಟಲಿಸ್ಟ್ ಅಥವಾ ಅಮೂಲ್ಯ ಲೋಹಗಳನ್ನೊಳಗೊಂಡ ಬೂದಿ, ಅಮೂಲ್ಯ ಲೋಹಗಳ ನಾಣ್ಯಗಳು,ಪಶು ಆಹಾರಗಳ ಸಂಯೋಜಕಗಳು ಅಥವಾ ಪೂರ್ವ ಮಿಶ್ರಣಗಳು

ಇವು ದುಬಾರಿಯಾಗಲಿವೆ

ಹತ್ತಿ, ಹತ್ತಿಯ ವೇಸ್ಟ್,ಕಚ್ಚಾ ರೇಷ್ಮೆ ಮತ್ತು ರೇಷ್ಮೆ ವೇಸ್ಟ್‌ನಿಂದ ರೇಷ್ಮೆ ನೂಲು,ಡಿನೇಚರ್ಡ್ ಇಥೈಲ್ ಅಲ್ಕೋಹಾಲ್,ಸಿಗಡಿ ಆಹಾರ,ಪೆಲೆಟ್‌ಗಳ ರೂಪದಲ್ಲಿಯ ಮೀನು ಆಹಾರ,ಮೀನು,ಕಠಿಣ ಚರ್ಮಿಗಳು, ಮೃದ್ವಂಗಿಗಳು ಅಥವಾ ಇತರ ಜಲಚರ ಅಕಶೇರುಕಗಳ ಆಹಾರ,ಮೆಕ್ಕೆಜೋಳದ ತವಡು,ಎಣ್ಣೆ ತೆಗೆಯಲಾದ ಅಕ್ಕಿಯ ಹೊಟ್ಟಿನ ಕೇಕ್, ಕಾರ್ಬನ್ ಬ್ಲಾಕ್, ಬಿಸ್-ಫೆನಾಲ್ ಎ, ಎಪಿಕ್ಲೋರೊಹೈಡ್ರಿನ್,ಪಾಲಿಕಾರ್ಬೊನೇಟ್‌ಗಳು,ಚರ್ಮ ಮತ್ತು ಚರ್ಮದ ಉತ್ಪನ್ನಗಳು, ಕಟ್ ಮತ್ತು ಪಾಲಿಷ್ ಮಾಡಲಾದ ಕ್ಯುಬಿಕ್ ಝಿರ್ಕೋನಿಯಾ,ಸಿಂಥೆಟಿಕ್ ಕಟ್ ಮತ್ತು ಪಾಲಿಷ್ ಮಾಡಲಾದ ಹರಳುಗಳು,ಸುರಂಗ ಕೊರೆಯುವ ಯಂತ್ರಗಳು ಮತ್ತು ಅವುಗಳ ಬಿಡಿಭಾಗಗಳು,ಇಗ್ನಿಷನ್ ವೈರಿಂಗ್ ಸೆಟ್,ಸೇಫ್ಟಿ ಗ್ಲಾಸ್,ಸಿಗ್ನಲಿಂಗ್‌ಉಪಕರಣದ ಭಾಗಗಳಂತಹ ನಿರ್ದಿಷ್ಟ ಆಟೊ ಬಿಡಿಭಾಗಗಳು, ಸ್ಕ್ರೂ,ನಟ್‌ಗಳಂತಹ ಲೋಹದ ಉತ್ಪನ್ನಗಳು,ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ,ಕ್ಯಾಮೆರಾ ಮೊಡ್ಯೂಲ್,ಕನೆಕ್ಟರ್‌ಗಳಂತಹ ಮೊಬೈಲ್ ಫೋನ್‌ಗಳ ನಿರ್ದಿಷ್ಟ ಭಾಗಗಳು,ಚಾರ್ಜರ್ ಅಥವಾ ಅಡಾಪ್ಟರ್‌ಗಳ ತಯಾರಿಕೆಯಲ್ಲಿ ಬಳಕೆಯಾಗುವ ಪ್ಲಾಸ್ಟಿಕ್,ರೆಫ್ರಿಜರೇಟರ್ ಮತ್ತು ಏರ್ ಕಂಡೀಷನರ್‌ಗಳ ಕಂಪ್ರೆಸರ್‌ಗಳು,ನಿರ್ದಿಷ್ಟ ಇನ್ಸುಲೇಟೆಡ್ ವೈರ್‌ಗಳು ಮತ್ತು ಕೇಬಲ್‌ಗಳು,ಬಾಬಿನ್,ವೈರ್‌ಗಳಂತಹ ಟ್ರಾನ್ಸ್‌ಫಾರ್ಮರ್‌ಗಳ ನಿರ್ದಿಷ್ಟ ಭಾಗಗಳು,ಎಲ್‌ಇಡಿ ಲೈಟ್‌ಗಳ ಭಾಗಗಳು,ದೀಪಗಳು,ಸೋಲಾರ್ ಇನ್ವರ್ಟರ್,ಸೋಲಾರ್ ಲ್ಯಾಂಟರ್ನ್ ಅಥವಾ ಸೋಲಾರ್ ದೀಪಗಳು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X