ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಬೆನ್ನಲ್ಲೇ ಟ್ಯಾಕ್ಸಿ ದರ ಏರಿಸಿದ ಸಾರಿಗೆ ಇಲಾಖೆ

ಬೆಂಗಳೂರು, ಫೆ.1: ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾದ ಬೆನ್ನಲ್ಲೇ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಇನ್ನಿತರೆ ಟ್ಯಾಕ್ಸಿಗಳಿಗೆ ದರ ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಹವಾನಿಯಂತ್ರಣ ರಹಿತ ಟ್ಯಾಕ್ಸಿಗೆ ಕನಿಷ್ಠ 4 ಕಿ.ಮೀ.ಗೆ 75 ರೂ., ಪ್ರತಿ ಕಿ.ಮೀ.ಗೆ 18 ರೂ., ಹವಾನಿಯಂತ್ರಿತ (ಎಸಿ) ಟ್ಯಾಕ್ಸಿಗೆ ಕನಿಷ್ಠ 4 ಕಿ.ಮೀ.ಗೆ 100 ರೂ., ಪ್ರತಿ ಕಿ.ಮೀ.ಗೆ 24 ರೂ., ಕಾಯುವಿಕೆ ದರಗಳು ಮೊದಲ 5 ನಿಮಿಷಗಳವರೆಗೆ ಉಚಿತ, ನಂತರದ ಪ್ರತಿ 1 ನಿಮಿಷಕ್ಕೆ 1 ರೂ., ಲಗೇಜ್ ದರಗಳು ಮೊದಲಿನ 120 ಕೆ.ಜಿ.ವರೆಗೆ ಉಚಿತ(ಸೂಟ್ ಕೇಸ್, ಬೆಡ್ಡಿಂಗ್ ಇತ್ಯಾದಿ ವೈಯಕ್ತಿಕ ಲಗೇಜುಗಳು) ನಂತರದ ಪ್ರತಿ 20 ಕಿ.ಗ್ರಾಂ.ಗೆ ಅಥವಾ ಅದರ ಭಾಗಕ್ಕೆ 7 ರೂ.ನಿಗದಿಪಡಿಸಲಾಗಿದೆ.
ರಾತ್ರಿ ದರಗಳು ರಾತ್ರಿ 12 ಗಂಟೆಯಿಂದ ಬೆಳಗಿನ 6 ಗಂಟೆವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣ ದರದ ಮೇಲೆ ಶೇ.10ರಷ್ಟು ಹೆಚ್ಚುವರಿ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.
Next Story





