ಆಂಗ್ ಸಾನ್ ಸೂ ಕಿ ಸಹಿತ ಬಂಧಿತ ನಾಯಕರ ಬಿಡುಗಡೆಗೆ ಅಮೆರಿಕ ಆಗ್ರಹ

ವಾಷಿಂಗ್ಟನ್, ಫೆ. 1: ಬರ್ಮಾದಲ್ಲಿ ಬಂಧಿತ ನಾಯಕರಾದ ಆಂಗ್ ಸಾನ್ ಸೂ ಕಿ ಹಾಗೂ ಇತರರನ್ನು ಬಿಡುಗಡೆ ಮಾಡುವಂತೆ ಅಮೆರಿಕದ ವಿದೇಶ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ರವಿವಾರ ಮ್ಯಾನ್ಮಾರ್ ಸೇನಾ ನಾಯಕರನ್ನು ಆಗ್ರಹಿಸಿದ್ದಾರೆ.
ಸರಕಾರಿ ಅಧಿಕಾರಿಗಳು ಹಾಗೂ ನಾಗರಿಕ ಸಮಾಜದ ನಾಯಕರನ್ನು ಬಂಧಿಸಿರುವ ವರದಿಯ ಕುರಿತಂತೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸುತ್ತದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.
ಎಲ್ಲ ಸರಕಾರಿ ಅಧಿಕಾರಿಗಳು, ನಾಗರಿಕ ಸಮಾಜ ನಾಯಕರನ್ನು ಬಿಡುಗಡೆ ಮಾಡುವಂತೆ ಹಾಗೂ ನವೆಂಬರ್ 8ರಂದು ನಡೆದ ಪ್ರಜಾತಾಂತ್ರಿಕ ಚುನಾವಣೆಯಲ್ಲಿ ಬರ್ಮಾದ ಜನತೆ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಗೌರವ ನೀಡುವಂತೆ ಬ್ಲಿಂಕೇನ್ ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಶಾಂತಿ ಹಾಗೂ ಅಭಿವೃದ್ಧಿಯ ಆಕಾಂಕ್ಷೆಯ ಬರ್ಮಾ ಜನರಿಗೆ ಅಮೆರಿಕ ಬೆಂಬಲವಾಗಿ ನಿಲ್ಲಲಿದೆ ಎಂದು ಬ್ಲಿಂಕೆನ್ ಹೇಳಿದ್ದಾರೆ.
Next Story





