ಎಂಟಿಬಿ ನಾಗರಾಜ್ ಒಡೆತನದ ಪಿಜಿಗೆ ನುಗ್ಗಿ ಕಳವು
ಬೆಂಗಳೂರು, ಫೆ.1: ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಒಡೆತನದ ಗರುಡಾಚಾರ್ ಪಾಳ್ಯದ ಸಾಯಿ ಅತಿಥಿ ಗೃಹಕ್ಕೆ (ಪಿಜಿ) ನುಗ್ಗಿದ ವ್ಯಕ್ತಿಯೋರ್ವ ಲ್ಯಾಪ್‍ಟಾಪ್, ಮೊಬೈಲ್‍ಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ ಬೆಳಕಿಗೆ ಬಂದಿದೆ.
ಜ.25ರಂದು ಮಧ್ಯರಾತ್ರಿ ನುಗ್ಗಿದ ವ್ಯಕ್ತಿಯೋರ್ವ ಮೊಬೈಲ್, ಲ್ಯಾಪ್ ಟಾಪ್‍ಗಳನ್ನು ಕಳವುಮಾಡಿ ಪರಾರಿಯಾಗಿದ್ದಾನೆ. ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಪ್ರಕರಣ ದಾಖಲಿಸಿರುವ ಮಹದೇವಪುರ ಠಾಣಾ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Next Story





