ಸೇನಾ ಪಡೆಯ ಉಪ ವರಿಷ್ಠರಾಗಿ ಲೆ.ಜ. ಚಾಂಡಿ ಪ್ರಸಾದ್ ಮೊಹಾಂತಿ ಅಧಿಕಾರ ಸ್ವೀಕಾರ

ಹೊಸದಿಲ್ಲಿ, ಫೆ. 1: ಲೆಫ್ಟಿನೆಂಟ್ ಜನರಲ್ ಚಾಂಡಿ ಪ್ರಸಾದ್ ಮೊಹಾಂತಿ ಸೋಮವಾರ ಸೇನಾ ಪಡೆಗಳ ಉಪ ವರಿಷ್ಠರಾಗಿ ಅಧಿಕಾರ ಸ್ವೀಕರಿಸಿದರು. ಅವರು ಲೆಫ್ಟಿನೆಂಟ್ ಎಸ್.ಕೆ. ಸೈನಿ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸೇನಾ ಪಡೆಗಳ ಉಪ ವರಿಷ್ಠರಾಗಿ ನಿಯೋಜಿತರಾಗುವ ಸಂದರ್ಭ ಲೆಫ್ಟಿನೆಂಟ್ ಜನರಲ್ ಮೊಹಾಂತಿ ಅವರು ಸೇನೆಯ ದಕ್ಷಿಣ ಕಮಾಂಡ್ ಆಗಿದ್ದರು. ಜನರಲ್ ಸೈನಿ ಅವರು ತನ್ನ ಸೇವೆಯಿಂದ ರವಿವಾರ ನಿವೃತ್ತರಾಗಿದ್ದರು.
ಡೆಹ್ರಾಡೂನ್‌ನ ಭಾರತೀಯ ಸೇನೆ ಕಾಲೇಜು, ಖಡಕ್ವಾಸ್ಲಾ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿರುವ ಲೆಫ್ಟೆನೆಂಟ್ ಜನರಲ್ ಸಿ.ಪಿ. ಮೊಹಾಂತಿ 1982 ಜೂನ್ 12ರಂದು ರಜಪೂತ್ ರೆಜಿಮೆಂಟ್‌ಗೆ ನಿಯೋಜಿತರಾಗಿದ್ದರು.
Next Story





