ಅ.14ರಂದು ಬೆಂಗಳೂರಿನಲ್ಲಿ 10 ಲಕ್ಷ ಮಂದಿಗೆ ಬೌದ್ಧ ಧಮ್ಮ ದೀಕ್ಷೆ: ಭಂತೆ ಬೋಧಿದತ್ತ

ಮಂಡ್ಯ, ಫೆ.1: ಬೆಂಗಳೂರಿನ ಪ್ಯಾಲೇಸ್ ಆವರಣರಣದಲ್ಲಿ ಅ.14ರಂದು 10 ಲಕ್ಷ ಜನರಿಗೆ ಮಹಾಧಮ್ಮ ದೀಕ್ಷೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ಸುಮಾರು ದೇಶಾದ್ಯಾಂತ 5 ಸಾವಿರ ಭಿಕ್ಕುಗಳು ಭಾಗವಹಿಸಲಿದ್ದಾರೆ ಎಂದು ಚಾಮರಾಜನಗರದ ನಳಂದ ಬೌದ್ಧ ವಿವಿ ಮುಖ್ಯಸ್ಥ ಭಂತೆಬೋಧಿದತ್ತ ಹೇಳಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಹಾಗೂ ವಿಶ್ವ ಬುದ್ಧ ಧಮ್ಮ ಸಂಘದ ಸಹಯೊಗದಲ್ಲಿ ನಡೆದ 65ನೇ ರಾಜ್ಯಮಟ್ಟದ ಧಮ್ಮ ದೀಕ್ಷಾ ಮಹೋತ್ಸವ ಕಾಯಕ್ರಮದ ಜಿಲ್ಲಾ ಪೂರ್ವಭಾವಿ ಸಮಾವೇಶದಲ್ಲಿ ಅವರು ಅವರು ಮಾತನಾಡಿದರು.
ಧಮ್ಮ ದೀಕ್ಷ ಕಾರ್ಯಕ್ರಮದ ನಂತರ ಕರ್ನಾಟಕದ್ಯಾದಂತ ಸುಮಾರು 5 ಸಾವಿರ ಕಿ.ಮೀ. ಅಂದಾಜು 500 ದಿನಗಳ ಕಾಲ ಎಲ್ಲಾ ಜಿಲ್ಲೆಗಳಲ್ಲಿಯೂ ಧಮ್ಮಪಾದಯಾತ್ರೆ ಮಾಡಲು ತಿರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಬೌದ್ಧ ಧಮ್ಮ ಜಗತ್ತಿನ ವೈಜ್ಞಾನಿಕ ಧರ್ಮವಾಗಿದೆ. ಬೌದ್ಧ ಧರ್ಮ ತುಂಬಾ ಸರಳವಾಗಿದ್ದು, ಯಾರೇ ಆದರು ಬೌದ್ಧ ಧರ್ಮವನ್ನು ಪಂಚಶೀಲ ಮತ್ತು ಅಷ್ಟಾಂಗ ಮಾರ್ಗದಲ್ಲಿ ಅನುಸರಿಸಬಹುದು ಎಂದು ಅವರು ತಿಳಿಸಿದರು.
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಸುಂಡಹಳ್ಳಿ ನಾಗರಾಜು, ಬೆಂಗಳೂರಿನ ಅಶೋಕ ಬುದ್ಧ ವಿಹಾರದ ಭಂತೆಜ್ಞಾನಲೋಕರ, ಮೈಸೂರಿನ ಅಷ್ಟಾಂಗಮಾರ್ಗ ಧ್ಯಾನಕೇಂದ್ರದ ಭಂತೆದೀಪಂಕರ, ನಾಗಸೇವ ಬುದ್ಧವಿಹಾರದ ಭಿಕ್ಕುಣಿ ಬುಧಮ್ಮ, ಸರಗೂರಿನ ಭಿಕ್ಕುಣಿ ಗೌತಮಿ, ಇತರೆ ಬೌದ್ಧಭಿಕ್ಕುಗಳು ಉಪಸ್ಥಿತರಿದ್ದರು.







