ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯ್ ಕುಮಾರ್ ಮನೆ, ಕಚೇರಿ ಮೇಲೆ ಎಸಿಬಿ ದಾಳಿ
ಡಾ. ವಿಜಯ್ ಕುಮಾರ್
ಕೋಲಾರ : ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯ್ ಕುಮಾರ್ ಮನೆ ಮತ್ತು ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ತಪಾಸಣೆ ಕೈಗೊಂಡಿದ್ದಾರೆ.
ಡಾ. ವಿಜಯ್ ಕುಮಾರ್ ಅವರ ಮುಳಬಾಗಿಲು ನಗರದಲ್ಲಿರುವ ಮನೆ ಹಾಗೂ ಅವರದ್ದೇ ಮಾಲಕತ್ವದ ನರ್ಸಿಂಗ್ ಹೋಂ ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಬೆಂಗಳೂರು, ಚಿಂತಾಮಣಿಯಲ್ಲಿ ಡಾ. ವಿಜಯ್ ಕುಮಾರ್ ಅವರಿಗೆ ಆಸ್ತಿ ಇರುವ ಬಗ್ಗೆ ದಾಖಲೆಗಳು ಪರಿಶೀಲಿಸಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಹಲವು ವರ್ಷಗಳಿಂದಲೂ ಇರುವ ಡಾ. ವಿಜಯ್ ಕುಮಾರ್ ಅವರ ಮೇಲೆ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನೇಕ ಹಗರಣದಲ್ಲಿ ಭಾಗಿ ಆಗಿರುವ ಆರೋಪ ಹಾಗೂ ಅಪಾರ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪ ಡಾ. ವಿಜಯ್ ಕುಮಾರ್ ವಿರುದ್ದ ಇದ್ದು, ಈ ಹಿನ್ನೆಲೆಯಲ್ಲಿ ಕೋಲಾರ ಎಸಿಬಿ ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಿ, ಹಲವು ಮಹತ್ವದ ಆಸ್ತಿ ದಾಖಲೆಗಳು ಮತ್ತು ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story