ತುಳು ಕಬಿತೆಲೆನೊ ‘ಉರಲ್‌ಕೂಟೊ’ದೊ ಲೇಸ್ ಕಾರ್ಯಕ್ರಮ

ಮಂಗಳೂರು, ಫೆ. 2: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ‘ಬೊಲಿಕೆ ಸಾಹಿತ್ಯ ಬೊಕ್ಕ ಕಲಾ ಚಾವಡಿ’ ಬಗಂಬಿಲ ಕುಡ್ಲ ಇದರ ಆಶ್ರಯದಲ್ಲಿ ತುಳು ಕಬಿತೆಲೆನೊ ‘ಉರಲ್‌ಕೂಟೊ’ ದೊ ಲೇಸ್ ಕಾರ್ಯಕ್ರಮವು ಇತ್ತೀಚೆಗೆ ತುಳುಭವನದ ಸಿರಿಚಾವಡಿಯಲ್ಲಿ ಜರುಗಿತು.
ಕಸಾಪ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಶಾಸಕ ಯು.ಟಿ. ಖಾದರ್, ಅಂಬ್ಲಮೊಗರು ಗ್ರಾಮದ ಸೇನರಹಿತ್ಲು ಕೊರತಿ ಗುಳಿಗ ದೈವಸ್ಥಾನದ ಅಧ್ಯಕ್ಷೆ ಇಂದಿರಾ, ತುಳು ಅಕಾಡಮಿಯ ಸದಸ್ಯ ಚೇತಕ್ ಪೂಜಾರಿ ಭಾಗವಹಿಸಿದ್ದರು.
ಹಿರಿಯ ಕವಿಗಳಾದ ಉಗ್ಗಪ್ಪ ಪೂಜಾರಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಸುಖಲತಾ ಶೆಟ್ಟಿ ಪಚ್ಚನಾಡಿ, ಅಶೋಕ ಎನ್. ಕಡೇಶಿವಾಲಯ್ಯ, ವಿಶ್ವನಾಥ ಕುಲಾಲ್ ಮಿತ್ತೂರು, ತೃಪ್ತಿ ಜಿ.ಕುಂಪಲ, ಅರ್ಚನಾ ಎಂ.ಬಂಗೇರ, ರಾಧಕೃಷ್ಣ ಉಳಿಯತಡ್ಕ, ರಾಜೇಶ್ ಶೆಟ್ಟಿ ದೋಟ, ಗುಣಾಜೆ ರಾಮಚಂದ್ರ ಭಟ್, ಅಶ್ವತ್ ಒಂಮಾರ್, ಡಾ.ಪಿ. ಕೃಷ್ಣಪ್ರಸಾದ್, ಅಂಡಾಲ ಗಂಗಾಧರ ಶೆಟ್ಟಿ, ಯಶವಂತ ಬೋಳೂರು, ಪೂವಪ್ಪನೇರಳಕಟ್ಟೆ, ಸುಧಾ ನಾಗೇಶ್, ಬದ್ರುದ್ದೀನ್ ಕೂಳೂರು, ಬಿ.ಎಸ್.ಪೂಜಾರಿ ಕಲಡ್ಕ, ಹಂಝ ಮಲಾರ್, ಎಸ್.ಕೆ. ಕುಂಪಲ, ವಾಣಿ ಲೋಕಯ್ಯ ಕೊಂಡಾಣ, ಶ್ರಿಮಾಲತಿ ಶೆಟ್ಟಿ ಮಾಣೂರು, ಪುಷ್ಪಾಜೋಗಿ, ಶೋಭಾ ಬಗಂಬಿಲ, ವೆಂಕಟೇಶ ಗಟ್ಟಿ, ಗೋಪಾಲಕೃಷ್ಣ , ವಿಜಯ್ ಕುಮಾರ್ ಭಂಡಾರಿ ಹೆಬ್ಬಾರಬೈಲು, ಬಾ.ಬಾ.ಉಜಿರೆ, ವಿಷ್ಣು ಗುಪ್ತ ಪುಣಚ, ಶರತ್ ಕುಮಾರ್ ಕೊಂಚಾಡಿ ಕವಿತೆಗಳನ್ನು ವಾಚಿಸಿದರು. ವಸಂತ ಬಾರಡ್ಕ ದೇಶಭಕ್ತಿಗೀತೆ ಹಾಡಿದರು. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.







