ಉಡುಪಿ ಕೌಸ್ತುಭ ಫೈಟರ್ಸ್ ತಂಡಕ್ಕೆ ‘ಮಹಾನಾಯಕ ಕ್ರಿಕೆಟ್ ಟ್ರೋಫಿ’

ಉಡುಪಿ, ಫೆ.3: ಕೊಡವೂರು ಮೂಡುಬೆಟ್ಟು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹ ಮತ್ತು ಯುವಕ ಮಂಡಲದ ಅಭಿವೃದ್ಧಿಗಾಗಿ ಎರಡು ದಿನಗಳ ‘ಮಹಾನಾಯಕ ಟ್ರೋಫಿ’ ಅಂತರ್ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯ ಕೂಟವನ್ನು ಬೀಡಿನಗುಡ್ಡೆಯ ಮೈದಾನದಲ್ಲಿ ಆಯೋಜಿಸಲಾಗಿತ್ತು.
ಉಡುಪಿ ಕೌಸ್ತುಭ ಫೈಟರ್ಸ್ ತಂಡ ವಿನ್ನರ್ಸ್ ಪ್ರಶಸ್ತಿ ಮತ್ತು 30ಸಾವಿರ ರೂ. ನಗದು ಬಹುಮಾನ ಮತ್ತು ಸಹಾರ ಮೂಡಬೆಟ್ಟು ತಂಡ ರನ್ನರ್ಸ್ ಪ್ರಶಸ್ತಿ ಮತ್ತು 15000ರೂ. ನದು ಬಹುಮಾನ ಪಡೆದುಕೊಂಡಿತು.
ಪಂದ್ಯಕೂಟವನ್ನು ಗೋಪಾಲ ಬಂಗೇರ ಪಂದುಬೆಟ್ಟು ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ದೇಹದಾರ್ಡ್ಯ ಪಟು ಎಚ್.ಆರ್. ಅರುಣ್ ಕುಮಾರ್ ಮತ್ತು ಆದಿಉಡುಪಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಡೇವಿಡ್ ಆಲ್ಬರ್ಟ್ ಇವರನ್ನು ಸನ್ಮಾನಿಸಲಾಯಿತು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್, ಫಾ.ವಿಲಿಯಂ ಮಾರ್ಟಿಸ್, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಪ್ರೊ.ಫಣಿರಾಜ್, ಶಾಮ್ ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರ್, ಸುಂದರ್ ಗುಜ್ಜರಬೆಟ್ಟು, ರಾಜು ಕುಂಜಿಬೆಟ್ಟು, ಭಾಸ್ಕರ್ ಮಾಸ್ತರ್, ಅಕ್ಕಣಿ ಟೀಚರ್, ವಾಸುದೇವ್ ಪುತ್ತೂರು, ಪೊಲೀಸ್ ಅಧಿಕಾರಿ ವಾಸಪ್ಪನಾಯ್ಕ್, ಯುವರಾಜ್ ಪುತ್ತೂರು, ಎಸ್.ಎಸ್. ಪ್ರಸಾದ್, ಶಿವಾನಂದ, ಯುವಕ ಮಂಡಲದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಶಂಕರ್‌ದಾಸ್ ಉಪಸ್ಥಿತರಿದ್ದರು. ಸುರೇಂದ್ರ ಕೋಟ್ಯಾನ್ ವಂದಿಸಿದರು. ಶಿಕ್ಷಕ ಸಂಘದ ಅಧ್ಯಕ್ಷ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.







