ಪಾಂಬೂರು ಮಾನಸ ವಿಶೇಷ ಶಾಲೆಗೆ ದೇಣಿಗೆ

ಉಡುಪಿ, ಫೆ.3: ಕೆಥೋಲಿಕ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ವತಿಯಿಂದ ಲಾಭಾಂಶದಲ್ಲಿ 10ಸಾವಿರ ರೂ. ದೇಣಿಗೆಯನ್ನು ಪಾಂಬೂರಿನ ಮಾನಸ ವಿಕಲಚೇತನ ಮಕ್ಕಳ ವಿಶೇಷ ಶಾಲೆಗೆ ನೀಡಲಾಯಿತು.
ಸೊಸೈಟಿಯ ಅಧ್ಯಕ್ಷ ಎಲೋಶಿಯಸ್ ಡಿ ಆಲ್ಮೇಡಾ ಮಾತನಾಡಿದರು. ಸೊಸೈಟಿಯ ನಿರ್ದೇಶಕ ಇಗ್ನೇಶಿಯಸ್ ಮೊನಿಸ್, ಕಾರ್ಯದರ್ಶಿ ಪೀಟರ್ ಫ್ರಾಂಕ್ ಕಾರ್ಡೋಜಾ, ರೊಸ್ಟನ್ ಡಿಸೋಜ, ಮಾನಸದ ಪ್ರಾಂಶುಪಾಲೆ ಸಿಸ್ಟರ್ ಅನ್ಸಿಲ್ಲಾ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಹೆನ್ರಿ ಮಿನೇಜಸ್ ಸ್ವಾಗತಿಸಿದರು. ಸಂಸ್ಥೆಯ ಆಡಳಿತಾ ಧಿಕಾರಿ ಜೊಸೆಫ್ ನೊರೋನ್ನಾ ವಂದಿಸಿದರು.
Next Story





