ಕುಂದಾಪುರ ಮುಖ್ಯರಸ್ತೆಗೆ ಡಾ.ಅಂಬೇಡ್ಕರ್ ಹೆಸರಿಡಲು ದಸಂಸ ಮನವಿ

ಕುಂದಾಪುರ, ಫೆ.3: ಕುಂದಾಪುರ ಪೇಟೆಯ ಮುಖ್ಯ ರಸ್ತೆಗೆ ಸಂವಿಧಾನ ಶಿಲ್ಪಿಡಾ.ಬಿ. ಆರ್. ಅಂಬೇಡ್ಕರ್ ಹೆಸರಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಮಿತಿ ಇಂದು ಕುಂದಾಪುರ ಪುರಸಭಾ ಅದ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ.
ಕುಂದಾಪುರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಬೇಕೆನ್ನುವ ಬೇಡಿಕೆಯನ್ನು ಹಿಂದೆ ಹಲವಾರು ಬಾರಿ ಮಂಡಿಸಲಾಗಿತ್ತು. ಇದೀಗ ಕುಂದಾಪುರ ಪೇಟೆಯ ಮುಖ್ಯ ರಸ್ತೆಗೆ ಗಣ್ಯರ ಹೆಸರಿಡುವ ಪ್ರಸ್ತಾವನೆ ಪುರಸಭೆಯ ಮುಂದಿದ್ದು ತಾಲೂಕಿನಲ್ಲಿರುವ ಅಂಬೇಡ್ಕರ್ ಭವನವೊಂದು ಬಿಟ್ಟರೆ ಬೇರೆ ಯಾವುದೇ ಸರಕಾರಿ ಸಂಸ್ಥೆಗಾಗಲಿ, ರಸ್ತೆಗಾಗಲಿ ಈತನಕ ಅಂಬೇಡ್ಕರ್ ಹೆಸರಿಟ್ಟಿರುವ ಉದಾಹರಣೆಗಳೇ ಇಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಕುಂದಾಪುರ ಪೇಟೆಯ ಮುಖ್ಯ ರಸ್ತೆಗೆ ಸಂವಿಧಾನ ಶಿಲ್ಪಿಯ ಹೆಸರಿಡುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಆಗ್ರಹಿಸಲಾಗಿದೆ. ಅಂಬೇಡ್ಕರ್ ಹೆಸರನ್ನು ಕಡೆಗಣಿಸಿ ಬೇರಾವುದೇ ಹೆಸರಿಡಲು ಮುಂದಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜುನಾಥ ಗಿಳಿಯಾರು, ವಾಸುದೇವ ಮುದೂರು ಎಚ್ಚರಿಸಿದ್ದಾರೆ.
ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನ ಮನೆ,ಮುಖಂಡರಾದ ರವಿಂದ್ರ ಸುಣ್ಣಾರಿ, ಸುರೇಶ್ ಹಕ್ಲಾಡಿ, ತಾಲೂಕು ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್‌ಕುಮಾರ್, ಬೈಂದೂರು ತಾಲೂಕು ಸಂಚಾಲಕ ಮಂಜುನಾಥ ನಾಗೂರು ನಿಯೋಗದಲ್ಲಿದ್ದರು.
ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನ ಮನೆ,ಮುಖಂಡರಾದ ರವಿಂದ್ರ ಸುಣ್ಣಾರಿ, ಸುರೇಶ್ ಹಕ್ಲಾಡಿ, ತಾಲೂಕು ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್‌ಕುಮಾರ್, ಬೈಂದೂರು ತಾಲೂಕು ಸಂಚಾಲಕ ಮಂಜುನಾಥ ನಾಗೂರು ನಿಯೋಗದಲ್ಲಿದ್ದರು.







