ಲಕ್ಷಾಂತರ ಮೌಲ್ಯದ ಅಕ್ರಮ ಅಕ್ಕಿ ವಶ: ಓರ್ವ ಆರೋಪಿಯ ಬಂಧನ

ವಿಜಯಪುರ: ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಅಕ್ಕಿ ಸಾಗಾಟ ಮಾಡುವ ವೇಳೆ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ಕಿ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಬಾಗಲಕೋಟ ಜಿಲ್ಲೆಯ ಗದ್ದನಕೇರಿ ನಿವಾಸಿ ಸದ್ದಾಂ ಅಮೀನಸಾಬ್ ಜಂಗಿ ಬಂಧಿತ ಆರೋಪಿ.
ಇನ್ನು ಬಂಧಿತ ಆರೋಪಿ ಸದ್ದಾಂ ಅಕ್ರಮವಾಗಿ 8 ಲಕ್ಷ ಮೌಲ್ಯದ 296 ಕ್ವಿಂಟಲ್ ಅಕ್ಕಿಯನ್ನು ವಿಜಯಪುರದಿಂದ ನಿಡಗುಂದಿ ಮಾರ್ಗವಾಗಿ ತೆಗೆದುಕೊಂಡು ಹೋಗುವಾಗ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಮನಗೂಳಿ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





