ಇರಾನ್ ಪರಮಾಣು ಒಪ್ಪಂದಕ್ಕೆ ಮರಳುವ ಕಾಲ ಬಂದಿಲ್ಲ: ಅಮೆರಿಕ
ವಾಶಿಂಗ್ಟನ್, ಫೆ. 3: ಪರಮಾಣು ಒಪ್ಪಂದಕ್ಕೆ ಮರುಚಾಲನೆ ನೀಡಲು ನೆರವಾಗುವಂತೆ ಐರೋಪ್ಯ ಒಕ್ಕೂಟಕ್ಕೆ ಇರಾನ್ ಸಲ್ಲಿಸಿರುವ ಪ್ರಸ್ತಾವವನ್ನು ಸ್ವೀಕರಿಸುವ ಸಮಯ ಸನ್ನಿಹಿತವಾಗಿಲ್ಲ ಎಂದು ಅವೆುರಿಕ ಮಂಗಳವಾರ ಹೇಳಿದೆ. ಅದೇ ವೇಳೆ, ಪರಮಾಣು ಒಪ್ಪಂದದ ಅಂಶಗಳನ್ನು ಸಂಪೂರ್ಣವಾಗಿ ಅನುಸರಿಸುವಂತೆ ಅದು ಇರಾನ್‌ಗೆ ಮತ್ತೆ ಕರೆ ನೀಡಿದೆ.
‘‘ಪ್ರಬಲ ದೇಶಗಳೊಂದಿಗೆ ಇರಾನ್ ಮಾಡಿಕೊಂಡಿರುವ 2015ರ ಪರಮಾಣು ಒಪ್ಪಂದದ ಬದ್ಧತೆಗಳನ್ನು ಇರಾನ್ ಸಂಪೂರ್ಣವಾಗಿ ನಿಭಾಯಿಸಿದರೆ, ಅಮೆರಿಕ ಕೂಡ ತನ್ನ ಬದ್ಧತೆಗಳನ್ನು ಪೂರೈಸುವುದು’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ನೂತನ ವಕ್ತಾರ ನೆಡ್ ಪ್ರೈಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
Next Story





