ಗುರುಪುರ ಬಂಟರ ಸಂಘಕ್ಕೆ ಆಯ್ಕೆ

ಸಂತೋಷ್ ಶೆಟ್ಟಿ
ಮಂಗಳೂರು, ಫೆ.3: ಗುರುಪುರ ಬಂಟರ ಮಾತೃ ಸಂಘದ 2021-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಆಯ್ಕೆಯಾಗಿದ್ದಾರೆ.
ಪ್ರವೀಣ್ ಆಳ್ವ ಗುಂಡ್ಯ (ಉಪಾಧ್ಯಕ್ಷ), ಹರೀಶ್ ಶೆಟ್ಟಿ ಉಪ್ಪುಗೂಡು (ಕಾರ್ಯದರ್ಶಿ), ಹರಿಕೇಶ್ ಶೆಟ್ಟಿ ನಡಿಗುತ್ತು (ಜೊ. ಕಾ), ಜಯರಾಮ ಶೆಟ್ಟಿ ‘ವಿಜೇತ’ (ಕೋಶಾಧಿಕಾರಿ), ಸದಾನಂದ ಚೌಟ ತಾರಿಕರಿಯ (ಸಂ.ಕಾ), ನಾಗರಾಜ ರೈ ತಿಮಿರಿಗುತ್ತು(ಸಂ.ಕಾ), ಚಂದ್ರಹಾಸ ಶೆಟ್ಟಿ ನಾರಳ (ಪ್ರ. ಸಂಚಾಲಕ), ಸತ್ಯವಾನ್ ಆಳ್ವ ಮೂಡುಶೆಡ್ಡೆ ಸಹ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.
ಸಂಘದ ಯುವ ವಿಭಾಗದ ನೂತನ ಅಧ್ಯಕ್ಷರಾಗಿ ದೀಪಕ್ ಶೆಟ್ಟಿ ಲಿಂಗಮಾರುಗುತ್ತು ಆಯ್ಕೆಯಾಗಿದ್ದರೆ, ಶ್ರವಣ್ ಶೆಟ್ಟಿ ಮೊಗರುಗುತ್ತು (ಉಪಾಧ್ಯಕ್ಷ), ಪ್ರಖ್ಯಾತ್ ಶೆಟ್ಟಿ ಮೂಡುಶೆಡ್ಡೆ(ಕಾರ್ಯದರ್ಶಿ), ಯಶ್ ಶೆಟ್ಟಿ ಕಾರಮೊಗರುಗುತ್ತು(ಜೊ.ಕಾ), ಸೃಜೇಶ್ ಎಸ್. ಶೆಟ್ಟಿ ವಾಮಂಜೂರು (ಕೋಶಾಧಿಕಾರಿ), ನಿತಿನ್ ಶೆಟ್ಟಿ ಮೊಗರು ಕೆರೆಬಳಿ (ಕ್ರೀ. ಕಾ), ಶಿವರಾಜ್ ಶೆಟ್ಟಿ ಮೂಡುಶೆಡ್ಡೆ (ಕ್ರೀ.ಕಾ) ಆಯ್ಕೆಯಾಗಿದ್ದಾರೆ.
ಸಂಘದ ಮಹಿಳಾ ವಿಭಾಗದ 2021-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಇಂದಿರಾಕ್ಷಿ ಪಿ ಶೆಟ್ಟಿ ಗಂಜಿಮಠ ಆಯ್ಕೆಯಾಗಿದ್ದಾರೆ. ದಿವ್ಯಾ ಸಿ. ಶೆಟ್ಟಿ ನಡುಗುಂಡ್ಯ (ಉಪಾಧ್ಯಕ್ಷ), ಗೀತಾ ಎಸ್. ಆಳ್ವ ಮೊಗರುಗುತ್ತು (ಕಾರ್ಯದರ್ಶಿ), ಪ್ರಮೀಳಾ ಎಲ್. ಶೆಟ್ಟಿ(ಕೋಶಾಧಿಕಾರಿ), ಆಶಾ ರೈ ಮೂಡುಶೆಡ್ಡೆ (ಜೊ. ಕಾ) ಮತ್ತು ಪ್ರತಿಮಾ ಎಸ್. ಶೆಟ್ಟಿ ಮೂಡುಶೆಡ್ಡೆ (ಸಂಚಾಲಕ) ಆಯ್ಕೆಯಾಗಿದ್ದಾರೆ.







