ಯುವತಿಗೆ ಲೈಂಗಿಕ ಕಿರುಕುಳ : ಆರೋಪಿ ಸೆರೆ
ಕೊಣಾಜೆ : ಯುವತಿಗೆ ಕಿರುಕುಳ ನೀಡಿದ ಘಟನೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೂಡುಬಿದಿರೆಯ ಜುನೈದ್ (19) ಎಂದು ತಿಳಿದುಬಂದಿದೆ.
ಜುನೈದ್ ಮುಡಿಪು ಕೈರಂಗಳ ಸಮೀಪದ ಯುವತಿಯನ್ನು ಪರಿಚಯ ಮಾಡಿಕೊಂಡು ಗೆಳೆತನ ಬೆಳೆಸಿದ್ದ ಎನ್ನಲಾಗಿದ್ದು ಬಳಿಕ ಮಂಗಳವಾರ ಮುಡಿಪು ಬೆಟ್ಟದ ಬಳಿಗೆ ಆಕೆಯನ್ನು ಬರ ಹೇಳಿ ಅಲ್ಲಿ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Next Story





