ಕೆಂಪುಕೋಟೆಯ ಮೇಲೆ ಸಿಖ್ ಧಾರ್ಮಿಕ ಧ್ವಜ ಹಾರಿಸಿದ ಪ್ರಕರಣ: ಓರ್ವನ ಬಂಧನ

ಹೊಸದಿಲ್ಲಿ: ಕಳೆದ ವಾರ ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ್ದ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ರೈತರು ಹಾಗೂ ಪೊಲೀಸರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯ ವೇಳೆ ಐತಿಹಾಸಿಕ ಕೆಂಪುಕೋಟೆಯ ಮೇಲೆ ಸಿಖ್ ಧಾರ್ಮಿಕ ಧ್ವಜ(ನಿಶಾನ್ ಸಾಹಿಬ್)ಆರೋಹಣಗೈದ ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನು ಇಂದು ಬಂಧಿಸಲಾಗಿದೆ.
ಬಂಧಿತ ವ್ಯಕ್ತಿಯನ್ನು ಧರ್ಮೇಂದ್ರ ಸಿಂಗ್ ಹರ್ಮಾನ್ ಎಂದು ಗುರುತಿಸಲಾಗಿದೆ.
ಭದ್ರತೆಯ ದೃಶ್ಯಗಳಲ್ಲಿ ಗುರುತಿಸಲಾಗಿರುವ 12 ಶಂಕಿತರ ಭಾವಚಿತ್ರಗಳನ್ನು ಪೊಲೀಸರು ಇಂದು ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿರುವವರು ಕೈಯಲ್ಲಿ ಕೋಲು ಹಾಗೂ ಲಾಠಿಗಳನ್ನು ಹಿಡಿದಿದ್ದು, ಇವರು ಕೆಂಪುಕೋಟೆಯಲ್ಲಿ ಹಿಂಸಾಚಾರ ನಡೆಸಿದ್ದರು ಇಲ್ಲವೇ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.
Next Story





